ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ ಮೊಸರು ಕುಡಿಕೆ ಉತ್ಸವ : ಬೀದಿಯುದ್ದಕ್ಕೂ ಕಟ್ಟಿದ ಮೊಸರು ಕುಡಿಕೆಗಳನ್ನು ಒಡೆದ ಯಕ್ಷಕೃಷ್ಣ

ಮೂಡುಬಿದಿರೆ: ಯಕ್ಷಗಾನ ಶೈಲಿಯ ಕೃಷ್ಣ ಪರಂಪರೆಯ ಮೂಡುಬಿದಿರೆಯ ಶ್ರೀಗೋಪಾಲಕೃಷ್ಣ ದೇವಸ್ಥಾನದ ಮೊಸರು ಕುಡಿಕೆ ಉತ್ಸವವು ಮೂಡುಬಿದಿರೆ ಪೇಟೆಯಲ್ಲಿ ಶುಕ್ರವಾರ ನಡೆಯಿತು.

ಪೇಟೆಯ ಬೀದಿಯುದ್ದಕ್ಕೂ ನೂರಾರು ಮಡಿಕೆಗಳು ಕಟ್ಟಿ, ಅವುಗಳನ್ನು ಯಕ್ಷಗಾನೀಯ ಶ್ರೀ ಕೃಷ್ಣ ವೇಷಧಾರಿ ಚಂದ್ರಶೇಖರ್ ಮಳಲಿ ಅವರು ಒಡೆಯುವ ಸಂಭ್ರಮಕ್ಕೆ ಊರ ಪರವೂರಿನ ಸಾವಿರಾರು ಮಂದಿ ಭಕ್ತಾಧಿಗಳು ಸಾಕ್ಷಿಯಾದರು.

ಪೇಟೆಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅಷ್ಟಮಿ, ಮೊಸರು ಕುಡಿಕೆ ಉತ್ಸವಕ್ಕೆ ಶತಮಾನದ ಇತಿಹಾಸವಿದೆ. ಕಟ್ಟಿದ ಮೊಸರು ಕುಡಿಕೆಗಳ ಹಗ್ಗದ ಇನ್ನೊಂದು ತುದಿಯನ್ನು ಇಳಿಸಿ, ಎಳೆದು ಶ್ರೀಕೃಷ್ಣ ವೇಷಧಾರಿಯನ್ನು ಸತಾಯಿಸಿ ಕೊನೆಗೊಮ್ಮೆ ಚಕ್ರಾಯುಧದಿಂದ ಶ್ರೀಕೃಷ್ಣನೇ ಮೊಸರು ಕುಡಿಕೆಗಳನ್ನು ಒಡೆಯುವ ಸಂಭ್ರಮ ನಾಡಿನಲ್ಲೇ ವಿಶೇಷವಾಗಿತ್ತು.

Edited By : Shivu K
Kshetra Samachara

Kshetra Samachara

20/08/2022 07:45 am

Cinque Terre

14.04 K

Cinque Terre

0

ಸಂಬಂಧಿತ ಸುದ್ದಿ