ಮಂಗಳೂರು: ಮಂಗಳೂರಿನ ಕುಂಪಲದಲ್ಲಿರುವ ಶ್ರೀ ಬಾಲಕೃಷ್ಣ ಮಂದಿರದ 25ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭ ಶೋಭಾಯಾತ್ರೆ ನಡೆಯಿತು. ಧಾರ್ಮಿಕತೆಯ ವೈಭವ ಸಾರುವ ನಾನಾ ಟ್ಯಾಬ್ಲೋಗಳು ಮೆರವಣಿಗೆಯ ಮೆರುಗು ಹೆಚ್ಚಿಸಿತು. ಶ್ರೀಕೃಷ್ಣನ ಅಲಂಕೃತ ವಿಗ್ರಹ ಮನಮೋಹಕವಾಗಿತ್ತು.
ಮಾರ್ಗದುದ್ದಕ್ಕೂ ಅಲ್ಲಲ್ಲಿ ಎತ್ತರದಲ್ಲಿ ಕಟ್ಟಿದ್ದ ಮೊಸರು ಕುಡಿಕೆಯನ್ನು ಒಡೆಯಲು ಯುವಕರ ತಂಡಗಳು ಹುರುಪಿನಿಂದ ಪಾಲ್ಗೊಂಡವು. ವೃತ್ತಾಕಾರದಲ್ಲಿ ಒಬ್ಬರ ಹೆಗಲ ಮೇಲೆ ಮತ್ತೊಬ್ಬರಂತೆ ಏರಿ ಪಿರಮಿಡ್ ರಚಿಸಿ, ಮಡಕೆಗಳನ್ನು ಚಾಣಾಕ್ಷತೆಯಿಂದ ಒಡೆದು ಸಂಭ್ರಮಿಸಿದರು.
PublicNext
19/08/2022 02:28 pm