ಉಡುಪಿ: ಉಡುಪಿಯಲ್ಲಿ ಇಂದು ಮತ್ತು ನಾಳೆ ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ ನಡೆಯುತ್ತಿದ್ದು, ಕೃಷ್ಣನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಅಷ್ಟಮಿಯ ದಿನವಾದ ಇಂದು ಭಕ್ತರು ಉಪವಾಸವಿದ್ದು ದೇವರ ದರ್ಶನ ಮಾಡಿ ಕೃಷ್ಣಜಪ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದ ಕೃಷ್ಣಮಠದಲ್ಲಿ ದೇವರ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಇವತ್ತು ಮಧ್ಯರಾತ್ರಿ 11:54ಕ್ಕೆ ಅರ್ಘ್ಯ ಪ್ರದಾನ ನಡೆಯಲಿದ್ದು, ಇದು ಅಷ್ಟಮಿಯ ಪ್ರಮುಖ ಧಾರ್ಮಿಕ ವಿಧಿಯಾಗಿದೆ. ಹಬ್ಬದ ಪ್ರಯುಕ್ತ ಶನಿವಾರ ಕೃಷ್ಣಮಠದಲ್ಲಿ ಶ್ರೀ ಕೃಷ್ಣ ಲೀಲೋತ್ಸವ ಅಥವಾ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಸಾಂಪ್ರದಾಯಿಕ ವೇಷದಾರಿ ಗೊಲ್ಲರಿಂದ ಮೊಸರು ಕುಡಿಕೆ ಉತ್ಸವ ಜರುಗಲಿದೆ.
ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ವಿದ್ಯಾಸಾಗರ ತೀರ್ಥರು ಇಂದು ವಿಶೇಷ ಪೂಜೆ ನೆರವೇರಿಸಿದರು. ಈ ಬಾರಿ ಅಷ್ಟಮಿಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದೆ.
Kshetra Samachara
19/08/2022 02:07 pm