ಕುಂದಾಪುರ: ಖಾರ್ವಿಕೇರಿಯ ಶ್ರೀಮಹಾಕಾಳಿ ದೇವಸ್ಥಾನದಿಂದ ಮತ್ಸ್ಯ ಸಂಪತ್ತು ಹಾಗೂ ಪ್ರಾಕೃತಿಕ ವಿಕೋಪಗಳಿಂದ ಯಾವುದೇ ಅವಘಡಗಳು ಜರಗದಂತೆ ವರ್ಷಂಪ್ರತಿ ಜರಗುವ ಸಮುದ್ರ ಪೂಜೆಯು ಇಂದು (ಶುಕ್ರವಾರ) ಕೋಡಿಯ ಸಮುದ್ರ ಕಿನಾರೆಯಲ್ಲಿ ವಿದ್ಯುಕ್ತವಾಗಿ ನೆರವೇರಿತು.
ದೇವಸ್ಥಾನದ ಅಧ್ಯಕ್ಷ ಜಯನಂದ ಖಾರ್ವಿ, ಉಪಾಧ್ಯಕ್ಷ ಪೀತಾಂಬರ ಗಣಪತಿ ಖಾರ್ವಿ, ಮೊಕ್ತೇಸರ ಪಾಂಡು ಸಾರಂಗ್, ಸಮುದ್ರ ಪೂಜೆಯ ವಿಧಿವಿಧಾನಗಳನ್ನು ದೇವಳದ ಪ್ರಧಾನ ಅರ್ಚಕ ಸುಮಂತ್ ಭಟ್ ಪೋರೋಹಿತ್ಯದಲ್ಲಿ ಸಾಂಗವಾಗಿ ನೆರವೇರಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ದೇವಸ್ಥಾನದ ಸಮಿತಿಯ ಸದಸ್ಯ ಸುನೀಲ್ ಖಾರ್ವಿ ತಲ್ಲೂರು ವಹಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು. ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ ನಾರಾಯಣ ಖಾರ್ವಿ ಮದ್ದುಗುಡ್ಡೆ, ವಿದ್ಯಾನಿಧಿ ಅಧ್ಯಕ್ಷ ದಿನಕರ ಖಾರ್ವಿ, ನವರಾತ್ರಿ ಸಮಿತಿಯ ಅಧ್ಯಕ್ಷೆ ಸಾವಿತ್ರಿ ಡಿ ಖಾರ್ವಿ, ಮಹಾಕಾಳಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಸಾರಂಗ, ಹಾಗೂ ಸಂಘದ ಸದಸ್ಯೆಯರ ಸಹಿತ ಹಲವಾರು ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kshetra Samachara
12/08/2022 11:11 pm