ಮಲ್ಪೆ: ಈ ವರ್ಷದ ಮೀನುಗಾರಿಕಾ ಋತು ಮತ್ತೆ ಆರಂಭವಾಗಿದ್ದು, ಮೀನು ಯಥೇಚ್ಛವಾಗಿ ಸಿಗಲಿ-ನಿರಂತರ ರಕ್ಷಣೆ ಸಿಗಲೆಂದು ಪ್ರಾರ್ಥಿಸಿ ಮೀನುಗಾರ ಮುಖಂಡರೆಲ್ಲ ಸೇರಿ ವಡಭಾಂಡೇಶ್ವರ ದೇವಳದಲ್ಲಿ ಪೂಜೆ ಸಲ್ಲಿಸಿ ಬಳಿಕ ಸಮುದ್ರ ಪೂಜೆ ನೆರವೇರಿಸಿದರು.
ಬಹುತೇಕ ಮೀನುಗಾರರು ಒಮ್ಮೆ ಕಡಲಿಗೆ ಇಳಿದರೆ ಮರಳಿ ಬರುವುದು ತಡವಾಗುತ್ತದೆ. ಒಂದು ವಾರ, 15 ದಿನ, ಕೆಲವೊಮ್ಮೆ ತಿಂಗಳುಗಟ್ಟಲೆ ಸಮುದ್ರದಲ್ಲೇ ಇರುವುದು ವಾಡಿಕೆ. ಅಂತಹ ಸಂದರ್ಭದಲ್ಲಿ ಕಡಲಿನಲ್ಲಿ ಯಾವುದೇ ಪ್ರಕೋಪ ಬಾಧಿಸದೇ ಇರಲಿ ಎಂಬ ಕಾರಣಕ್ಕೆ ಸಮುದ್ರ ಪೂಜೆ ಮಾಡಿದ ನಂತರವೇ ಕಡಲಿಗೆ ಇಳಿಯುವ ಸಂಪ್ರದಾಯವನ್ನು ಮೀನುಗಾರರು ಇಲ್ಲಿ ಪಾಲಿಸಿಕೊಂಡು ಬಂದಿದ್ದಾರೆ.
ಅದರಂತೆ ವಡಭಾಂಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೀನುಗಾರರು ಸಾಮೂಹಿಕವಾಗಿ ಸಮುದ್ರದ ದಂಡೆಗೆ ತೆರಳಿ ಪೂಜೆ ಸಲ್ಲಿಸಿ ಹಾಲನ್ನು ಸಮುದ್ರಕ್ಕೆ ಸುರಿದು ಪೂಜೆ ಪ್ರಾರ್ಥಿಸಿದರು.
Kshetra Samachara
12/08/2022 02:50 pm