ಮಂಗಳೂರು: ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿಲ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ಪರಮಹಂಸ ಮೋಹನ ದಾಸ ಸ್ವಾಮೀಜಿಯವರ ನೇತೃತ್ವದಲ್ಲಿ, ವರ ಮಹಾಲಕ್ಷ್ಮಿ ಪೂಜೆ ವಿಜೃಂಭಣೆಯಿಂದ ನಡೆದಿದೆ. ಮುಂಜಾನೆಯಿಂದಲೇ ದೇವರಿಗೆ ವಿಶೇಷ ಸೇವೆಗಳ ನಡೆದಿವೆ.
ವೈದಿಕ ವಿಧಿವಿಧಾನಗಳೊಂದಿಗೆ ಚಂಡಿಕಾ ಹೋಮ, ಕನಕಧಾರಯಾಗ, ವರ ಮಹಾಲಕ್ಷ್ಮಿ ಪೂಜೆಯ ಬಳಿಕ ಯಾಗದ ಪೂರ್ಣಾಹುತಿ ನೆರವೇರಿತು. ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ ಅದರಲ್ಲೂ ಹೆಣ್ಮಕ್ಕಳಿಗೆ ಅತ್ಯಂತ ಪ್ರಿಯವಾದ ತಿಂಗಳು. ಪ್ರತಿಯೊಂದು ಹಬ್ಬದಲ್ಲೂ ಅಲಂಕಾರ ಮಾಡಿಕೊಂಡು ಸಂಭ್ರಮದಿಂದ ಖುಷಿಪಡುತ್ತಾರೆ. ಆದರೆ, ಈ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬ ಮಾತ್ರ ಎಲ್ಲರಿಗೂ ಅತ್ಯಂತ ಪ್ರಿಯವಾದುದು.
Kshetra Samachara
05/08/2022 12:47 pm