ಪುತ್ತೂರು: ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ, ನಾಗರ ಪಂಚಮಿ ಹಬ್ಬ. ಎಲ್ಲೆಡೆ ಸಂಭ್ರಮ ಸಡಗರ ತುಂಬಿರುವುದನ್ನು ಕಾಣಬಹುದು. ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ನಾಗರ ಪಂಚಮಿ ವಿಶೇಷ ಆಚರಣೆ ನಡೆಯುತ್ತಿದೆ.
ಬೆಳಿಗ್ಗೆ ದೇವಳದ ಮೂಲ ನಾಗನ ಸನ್ನಿಧಿ ಮತ್ತು ದೇವಳದ ಬಳಿಯ ವಾಸುಕೀ ನಾಗರಾಜ ಸನ್ನಿಧಿಯಲ್ಲಿ ಹಾಲಿನ ಅಭಿಷೇಕ ಮತ್ತು ಸೀಯಾಳಾಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು.
ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ವೇ ಮೂ ಉದಯ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು.
Kshetra Samachara
02/08/2022 08:56 pm