ಕಾಪು: ಬಿರುವೆರ್ ಕಾಪು ಸೇವಾ ಟ್ರಸ್ಟ್ ಹಾಗೂ ಹಿಂದೂರಕ್ಷಾ ವೆಲ್ ಫೇರ್ ಟ್ರಸ್ಟ್ ಮೂಳೂರು ವತಿಯಿಂದ ಹಾಳೆ ಮರದ ತೊಗಟೆಯಲ್ಲಿ ಸಿದ್ಧಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತುಳುನಾಡಿನ ಆಚರಣೆಗಳಲ್ಲೊಂದಾಗಿರುವ ಆಟಿದ ಅಮವಾಸ್ಯೆಯಂದು ಹಾಳೆ ಮರದಲ್ಲಿ ಸರ್ವ ರೋಗ ನಿವಾರಣೆ ಮಾಡುವ ಶಕ್ತಿ ಕಷಾಯಕ್ಕೆ ಇದೆ ಎಂಬ ನಂಬಿಕೆ ಇದೆ. ಇಂದಿನ ಆಧುನಿಕ ಯುಗದಲ್ಲಿ ಪೇಟೆ ಭಾಗದ ಜನರು ಆಟಿದ ಕಷಾಯದಿಂದ ವಂಚಿತರಾಗುವಂತಾಗಿದ್ದು ಪ್ರತೀ ಮನೆ ಮನೆಗೂ ಕಷಾಯ ತಲುಪಿಸಬೇಕೆಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮಗೊಳ್ಳಲಾಗಿದೆ.
ಸುಮಾರು 100ಕ್ಕೂ ಅಧಿಕ ಲೀಟರ್ ನಷ್ಟು ಹಾಳೆ ಮರದ ಕೆತ್ತೆಯ ಕಷಾಯವನ್ನು ಸಿದ್ಧ ಪಡಿಸಲಾಗಿದ್ದು, ಕಾಪು, ಮೂಳೂರು ಪರಿಸರದ ನೂರಾರು ಮಂದಿಗೆ ವಿತರಿಸಲಾಯಿತು. ಮುಂಜಾನೆ 3 ಗಂಟೆಗೆ ಎದ್ದು ಕಡೆಗಳಲ್ಲಿ ಹಾಳೆ ಮರದ ಕೆತ್ತೆಯನ್ನು ಸಂಗ್ರಹಿಸಿ, ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದೆ. ಈ ದಿನ ಹಾಳೆಮರದ ಕಷಾಯ ಕುಡಿಯುದರಿಂದ ಸಣ್ಣ ಪುಟ್ಟ ಕಾಯಿಲೆಗಳು, ಸಾಂಕ್ರಾಮಿಕ ರೋಗಗಳು ಬರಲಾರವು ಎಂಬ ನಂಬಿಕೆ ಇದೆ. ಒಟ್ಟಿನಲ್ಲಿ ಈ ಕಹಿಯಾದ ಕಷಾಯವನ್ನು ಜನರು ಇಷ್ಟಪಟ್ಟು ಕುಡಿಯುವುದು ಎಲ್ಲೆಡೆ ಕಂಡು ಬಂತು.
Kshetra Samachara
28/07/2022 09:48 am