ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಇತಿಹಾಸ ಪ್ರಸಿದ್ಧ ಕಾಲವಾದಿ ಆಟಿ ಮಾರಿಪೂಜೆಗೆ ಚಾಲನೆ

ಕಾಪು: ತುಳುನಾಡಿನ ಇತಿಹಾಸ ಪ್ರಸಿದ್ಧ ಕಾಪುವಿನ ಮೂರು ಮಾರಿಗುಡಿಗಳಾದ ಹಳೆ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಯಮ್ಮ ದೇವಸ್ಥಾನ, ಕಲ್ಯಾ ಮಾರಿಯಮ್ಮ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ನಡೆಯುವ ತುಳುವರ ಆಟಿ ತಿಂಗಳ ಮಾರಿಪೂಜೆಗೆ ಮಂಗಳವಾರ ರಾತ್ರಿ ಚಾಲನೆ ನೀಡಲಾಯಿತು.

ಪ್ರತಿ ಮಾರಿ ಪೂಜೆಗಳ ಸಂದರ್ಭದಲ್ಲಿ ಕಾಪು ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಒಡೆಯ ಶ್ರೀ ಲಕ್ಷ್ಮೀಜನಾರ್ಧನ ದೇವಸ್ಥಾನದಿಂದ ಮತ್ತು ಹಳೆ ಮಾರಿಗುಡಿಗೆ ಶ್ರೀವೆಂಕಟರಮಣ ದೇವರ ಸನ್ನಿಧಾನದಿಂದ ಮಾರಿಯಮ್ಮದೇವಿಯ ಬಿಂಬ ಮತ್ತು ಆಭರಣಗಳನ್ನು ಮೆರವಣಿಗೆ ಮೂಲಕ ತರಲಾಗುತ್ತದೆ.

ಮಾರಿ ಪೂಜೆಯ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮೂರು ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ಜರುಗುವುದು ಇಲ್ಲಿನ ವೈಶಿಷ್ಟ್ಯವಾಗಿದೆ.

Edited By : Shivu K
Kshetra Samachara

Kshetra Samachara

27/07/2022 08:53 am

Cinque Terre

11.32 K

Cinque Terre

1

ಸಂಬಂಧಿತ ಸುದ್ದಿ