ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಲಾಡ್ಜ್ ಗೆ ಭಿನ್ನ ಕೋಮಿನ ಜೋಡಿ; ಹಿಂದೂ ಸಂಘಟನೆಗಳ ಕಿಡಿ!

ಬೈಂದೂರು: ತಾಲೂಕಿನ ಉಪ್ಪುಂದದ ಲಾಡ್ಜ್ ವೊಂದಕ್ಕೆ ತಂಗಲು ಬಂದಿದ್ದ ಭಿನ್ನ ಕೋಮಿನ ಜೋಡಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡು ಬಳಿಕ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಉಪ್ಪುಂದದ ಲಾಡ್ಜ್ ಗೆ ಉಳ್ಳಾಲಬೈಲು ನಿವಾಸಿ ಅಮಿರ್ ಅಲಿ(45) ಮತ್ತು ಉಳ್ಳಾಲದ ಹಿಂದೂ ಯುವತಿ ಜೊತೆಯಾಗಿ ಆಗಮಿಸಿದ್ದಾರೆನ್ನಲಾಗಿದೆ. ವಿಷಯ ತಿಳಿದ ಹಿಂದೂ ಸಂಘಟನೆ ಕಾರ್ಯಕರ್ತರು ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಪೂರ್ವಾಪರ ವಿಚಾರಿಸಿದಾಗ ಅವರಿಬ್ವರು ಪರಸ್ಪರ ಒಪ್ಪಿಗೆಯಿಂದಲೇ ಬಂದಿದ್ದಾರೆ ಎಂಬುದು ಗೊತ್ತಾಗಿದೆ.

ಅಮೀರ್ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ಅಂಗಡಿ ಇಟ್ಟುಕೊಂಡಿದ್ದು, ಯುವತಿ ಆತನದೇ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇದೀಗ ಯುವತಿಯ ಮನೆಯವರಿಗೆ ವಿಷಯ ತಿಳಿಸಿದ್ದು, ಆಕೆಯ ಪೋಷಕರು ಬೈಂದೂರು ಪೊಲೀಸ್‌ ಠಾಣೆಗೆ ಬರುತ್ತಿರುವುದಾಗಿ ತಿಳಿದುಬಂದಿದೆ.

Edited By : Shivu K
PublicNext

PublicNext

22/07/2022 08:46 pm

Cinque Terre

46.74 K

Cinque Terre

6

ಸಂಬಂಧಿತ ಸುದ್ದಿ