ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 2024ರ ಮಕರ ಸಂಕ್ರಾಂತಿಗೆ ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠೆ; ಪೇಜಾವರ ಶ್ರೀ

ಮಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. 2024ರ ಮಕರ ಸಂಕ್ರಾಂತಿಯ ಉತ್ತರಾಯಣ ಪರ್ವ ಕಾಲದಲ್ಲಿ ಮಂದಿರದಲ್ಲಿ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಕದ್ರಿಯ ಮಂಜು ಪ್ರಾಸಾದದಲ್ಲಿ ಪೇಜಾವರ ಮಠದ ಪಟ್ಟದ ದೇವರ ತುಲಾಭಾರ, ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಟ್ರಸ್ಟ್ ನ ಮೂಲ ಉದ್ದೇಶ ರಾಮಮಂದಿರದ ನಿರ್ಮಾಣ. ಆ ಬಳಿಕ ಸಮಾಜಮುಖಿ ಯೋಜನೆಗಳನ್ನು ಟ್ರಸ್ಟ್ ಮುಂದೆ ಇಟ್ಟಿದ್ದೇವೆ. ಶ್ರೀರಾಮನ ಹೆಸರಿನಲ್ಲಿ ಗ್ರಾಮಗಳನ್ನು ದತ್ತು ಪಡೆದು ರಾಮರಾಜ್ಯವನ್ನು ನಿರ್ಮಾಣ ಮಾಡುವ ಸಂಕಲ್ಪ ನಮ್ಮ ಮುಂದಿದೆ ಎಂದರು.

ಶ್ರೀರಾಮ ಮಂದಿರ ನಿರ್ಮಾಣ ಸ್ಥಳ, ಧೂಳು ಮಿಶ್ರಿತ ಮರಳನ್ನು ಹೊಂದಿದೆ. ಅದನ್ನು 40 ಅಡಿ ಆಳದವರೆಗೆ ಸಂಪೂರ್ಣ ಹೊರ ತೆಗೆದು ಅಡಿಪಾಯ ಗಟ್ಟಿಗೊಳಿಸುವ ಕಾರ್ಯ ಆಗಿದೆ. ಅದರ ಮೇಲೆ ಪೀಠ ಸ್ಥಾಪನಾ ಕಾರ್ಯ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥರಿಂದ ನಡೆದಿದೆ.

ರಾಮನ ಆರಾಧಕರಾದ ನಾವು ರಾಮನಿಗೆ ತಲೆ ಬಾಗುವುದೆಂದರೆ ಸದ್ಗುಣಗಳಿಗೆ ತಲೆಬಾಗುವುದು ಎಂದರ್ಥ. ಮಾತೃಭೂಮಿ, ತಾಯಿ, ರಾಷ್ಟ್ರದ ಬಗ್ಗೆ ಎಷ್ಟು ಗೌರವ ಇರಬೇಕು ಎಂಬುದನ್ನು ಶ್ರೀರಾಮಚಂದ್ರ ತೋರಿಸಿಕೊಟ್ಟಿದ್ದಾನೆ. ಅವನ್ನು ನಾವು ಪಾಲಿಸಬೇಕಾಗಿದೆ. ಈ ಮೂಲಕ ರಾಮರಾಜ್ಯದ ಕನಸು ಕೈಗೂಡಲು ಸಾಧ್ಯ. ಆದ್ದರಿಂದ ಸಮಾಜಕ್ಕೆ ಒಳ್ಳೆಯದಾಗಬೇಕಾದರೆ ಪಕ್ಷಾತೀತವಾಗಿ ಎಲ್ಲರೂ ಈ ಕಾರ್ಯ ಮಾಡಬೇಕು. ನಾಗರಿಕ ಸಮಾಜದಲ್ಲಿ ಕೆಲವು ಮಂದಿ ಅನಾಗರಿಕರೂ ಇರುತ್ತಾರೆ. ಅವರನ್ನು ಮಟ್ಟ ಹಾಕುವುದು ಸರಕಾರದ ಕೆಲಸ. ಅದನ್ನು ನಿಷ್ಪಕ್ಷಪಾತವಾಗಿ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.

Edited By : Nagesh Gaonkar
Kshetra Samachara

Kshetra Samachara

04/07/2022 09:24 pm

Cinque Terre

7.06 K

Cinque Terre

0

ಸಂಬಂಧಿತ ಸುದ್ದಿ