ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪುತ್ತಿಗೆ ಮಠಾಧೀಶರಿಂದ ಅಮೆರಿಕದಲ್ಲಿ ನೂರು ಕೋಟಿಯ ಇಸ್ಕಾನ್ ದೇಗುಲಕ್ಕೆ ಶಿಲಾನ್ಯಾಸ

ಉಡುಪಿ: ಅಮೆರಿಕದ ಕೊಲಂಬಸ್‌ನಲ್ಲಿ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಇಸ್ಕಾನ್ ದೇಗುಲಕ್ಕೆ ಉಡುಪಿ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಧ್ಯುಕ್ತ ಶಿಲಾನ್ಯಾಸ ನೇರವೇರಿಸಿದರು. ಈ ಸಂದರ್ಭ ಇಸ್ಕಾನ್ ಸಂಸ್ಥೆಯ ಕೇಂದ್ರೀಯ ನಿರ್ದೇಶಕರಾದ ವೀರ ಕೃಷ್ಣ ಗೋ ಸ್ವಾಮಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ನೆಲೆಯಾಗಿರುವ ನೂರಾರು ಶ್ರೀಕೃಷ್ಣ ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡರು. ಉಡುಪಿ ಅಷ್ಟಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಅಂಗ ಸಂಸ್ಥೆಗಳನ್ನು ದೇಶ ವಿದೇಶಗಳಲ್ಲೂ ಕಾಣಬಹುದು. ಅಮೆರಿಕದಲ್ಲೂ ಶಾಖೆಗಳಲ್ಲಿ ತೆರೆದಿರುವ ಪುತ್ತಿಗೆ ಶ್ರೀಗಳು ಅಲ್ಲಿ ಅಪಾರ ಶಿಷ್ಯರನ್ನು ಹೊಂದಿದ್ದಾರೆ.

Edited By : Shivu K
PublicNext

PublicNext

27/06/2022 08:10 pm

Cinque Terre

61.68 K

Cinque Terre

1

ಸಂಬಂಧಿತ ಸುದ್ದಿ