ಮುಲ್ಕಿ: ಸಮೀಪದ ಶಿಮಂತೂರಿನ ಶ್ರೀ ಆದಿ ಜನಾರ್ದನ ದೇವಸ್ತಾನದಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿವಾರಣೆ ಹಾಗೂ ಲೋಕ ಸುಭಿಕ್ಷೆಗಾಗಿ ಊರ ಪರವೂರ ಭಕ್ತಾದಿಗಳಿಂದ ಶ್ರೀ ಆದಿ ಜನಾರ್ದನ ದೇವರಿಗೆ ಸೀಯಾಳ ಅಭಿಷೇಕ ದೇವಸ್ಥಾನದ ಅರ್ಚಕ ಪುರುಷೋತ್ತಮ ಭಟ್ ಹಾಗೂ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಅರ್ಚಕ ಪುರುಷೋತ್ತಮ ಭಟ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಲೋಕ ಸುಭಿಕ್ಷೆಗೆ ಸೀಯಾಳ ಅಭಿಷೇಕ ನಡೆಯುತ್ತಿದ್ದು ಅನಾವೃಷ್ಟಿ ನಿವಾರಣೆ ಹಾಗೂ ಲೋಕ ಸುಭೀಕ್ಷೆಯಾಗಲಿ ಎಂದರು.
ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಪಂ.ಸದಸ್ಯೆ ಪದ್ಮಿನಿ ವಿಜಯ ಶೆಟ್ಟಿ, ಸೀತಾರಾಮ್ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಶಶಿಕಲಾ ಎನ್.ಕುಂದರ್, ಕಲ್ಪನಾ ಬಲ್ಲಾಳ, ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ, ಮೋಹನ್ ಕೋಟ್ಯಾನ್, ಉದಯಕುಮಾರ್ ಶೆಟ್ಟಿ ಅಧಿಧನ್, ಗೋಪಾಲ್ ಶಿಮಂತೂರು, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
19/06/2022 10:49 am