ಬಜಪೆ: ಎಕ್ಕಾರು ಕಡೆ ತಾಂಗಾಡಿ ಶ್ರೀ ಸರಳಧೂಮಾವತಿ ದೈವದ ಕಡೆ ನೇಮೋತ್ಸವವು ಮಂಗಳವಾರದಂದು ರಾತ್ರಿ ಜರುಗಿತು.ಅಂದು ಸಂಜೆ ಎಕ್ಕಾರು ಕಾವರ ಮನೆಯಿಂದ ಸರಳಧೂಮಾವತಿ ದೈವದ ಭಂಡಾರವು ತಾಂಗಾಡಿ ದೈವಸ್ಥಾನ(ಸಾನ)ಕ್ಕೆ ಆಗಮಿಸುತ್ತದೆ. ಆಗಮಿಸಿದ ಬಳಿಕ ಧಾರ್ಮಿಕ ವಿಧಿಗಳು ದೈವಸ್ಥಾನದಲ್ಲಿ ನಡೆದು ರಾತ್ರಿ ಸರಳ ಧೂಮಾವತಿ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರುಗುತ್ತದೆ. ಎಕ್ಕಾರು ಪರಿಸರದಲ್ಲಿ ಕಡೆ ತಾಂಗಾಡಿಯಲ್ಲಿ ನಡೆಯುವಂತಹ ನೇಮೋತ್ಸವವು ಕೊನೆಯ ನೇಮೋತ್ಸವ ವಾಗಿದ್ದು,ಇಲ್ಲಿ ನೇಮೊತ್ಸವ ನಡೆದ ಬಳಿಕ ಎಕ್ಕಾರಿನಲ್ಲಿ ನೇಮೊತ್ಸವಗಳು ನಡೆಯುದಿಲ್ಲ.
Kshetra Samachara
18/05/2022 06:02 pm