ಕೊಲ್ಲೂರು: ಇತ್ತೀಚೆಗಷ್ಟೆ ಕನ್ನಡಪರ ಸಂಘಟನೆಗಳಿಂದ ಮಸಿ ಬಳಿಸಿಕೊಂಡಿದ್ದ ಕಾಳಿ ಸ್ವಾಮಿ ,ಕೊಲ್ಲೂರಿನಲ್ಕಿ ಮಾತನಾಡಿ ,ಅವರು ವಿಪರೀತ ಕುಡಿದಿದ್ದರು.ತುಂಬ ವಾಸನೆ ಬರುತ್ತಿತ್ತು.ಮಸಿ ಬಳಿದರೆ ಸ್ನಾನ ಮಾಡಿದರೆ ಹೋಗುತ್ತೆ ,ಆದರೆ ಯಾರಾದರೂ ಚಾಕು ಹಾಕಿದರೆ ಏನು ಮಾಡುವುದು ಎಂದು ಹೇಳಿದ್ದಾರೆ.
ಕೊಲ್ಲೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ದೇವಸ್ಥಾನದ ಆವರಣದಲ್ಲಿ ಮುಸಲ್ಮಾನ ವ್ಯಾಪಾರಸ್ಥರನ್ನು ದೂರ ಇಟ್ಟಿದ್ದನ್ನು ಸಮರ್ಥಿಸಿಕೊಂಡರು.ಇದು ಹಳೆಯ ಕಾನೂನು. ಈಗ ತಂದಿದ್ದಲ್ಲ.ಅವರು ದೂರ ವ್ಯಾಪಾರ ಮಾಡಲಿ ,ಆದರೆ ಆವರಣದಲ್ಲಿ ಬೇಡ ಎಂದು ಹೇಳಿದ್ದಾರೆ.ಸರಕಾರದ ಕಾನೂನನ್ನು ಪಾಲಿಸದೆ ಅಂಗಡಿಗಳನ್ನು ಮುಚ್ಚಿದರು.ಈಗ ನಾವು ಮುಚ್ಚಿಸುತ್ತಿದ್ದೇವೆ ಎಂದು ಹೇಳಿದರು.
ಆಝಾನ್ ವಿಚಾರದಲ್ಲಿ ಈಗ ಮುಸಲ್ಮಾನರೇ ಶಬ್ದ ಕಡಿಮೆ ಮಾಡಿದ್ದಾರೆ.ಇದಕ್ಕೆ ನಾನು ಅಭಿನಂದಿಸುತ್ತೇನೆ ಎಂದು ಕಾಳಿ ಸ್ವಾಮಿ ಹೇಳಿದ್ದಾರೆ.
PublicNext
17/05/2022 12:37 pm