ಬ್ರಹ್ಮಾವರ: ಬ್ರಹ್ಮಾವರದ ಸಾಲಿಕೇರಿ ಸಪರಿವಾರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶ , ಚಂಡಿಕಾಯಾಗ , ದುರ್ಗಾ ಪೂಜೆ ಮತ್ತು ವಾರ್ಷಿಕ ಪೂಜೆ ಜರುಗಿತು. ಸೂರ್ಯ ಮಾಸ್ಟರ್ ಮತ್ತು ತಾರಾಮತಿ ದಂಪತಿ ಸಂಕಲ್ಪ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಇದೇ ಸಂದರ್ಭದಲ್ಲಿ ಹಲವಾರು ದಾನಿಗಳನ್ನು ಗೌರವಿಸಲಾಯಿತು. ನೂತನವಾಗಿ ರಚನೆಗೊಂಡ ಸ್ವಾಗತ ಗೋಪುರವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾದಂ ಮೇಲೋಡಿಸ್ ಚಾಂತಾರು ಇವರಿಂದ ನಡೆದ ಭಕ್ತಿ ಸಂಗೀತ ಆಸ್ತಿಕರನ್ನು ಮಂತ್ರಮುಗ್ಧರನ್ನಾಗಿಸಿತು. ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಮತ್ತು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು.
Kshetra Samachara
13/05/2022 05:15 pm