ಉಡುಪಿ: ಮೈಕ್ ಬಳಕೆಗೆ ಸಂಬಂಧಪಟ್ಟು ಸುಪ್ರೀಂಕೋರ್ಟ್ ಆದೇಶ ಮತ್ತು ಸರಕಾರದ ಹೊಸ ನಿಯಮಗಳು ಎಲ್ಲ ಧರ್ಮೀಯರಿಗೂ ಅನ್ವಯವಾಗಬೇಕು ಎಂದು ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಹೇಳಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಈಗಾಗಲೇ ಮಸೀದಿಗಳಲ್ಲಿ ಮೈಕ್ ಡೆಸಿಬಲ್ ಅನ್ನು ಕಡಿಮೆ ಮಾಡಲಾಗಿದೆ. ಆದರೆ ಯಕ್ಷಗಾನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೆಲವು ಕಡೆ ಜೋರಾಗಿ ಮೈಕ್ ಬಳಸುವುದು ಕಂಡುಬರುತ್ತಿದೆ. ನಿಯಮ ಅಲ್ಲೂ ಕೂಡ ಅನ್ವಯವಾಗಬೇಕು.
ಕೇವಲ ಆಝಾನ್ ಮತ್ತು ಮಸೀದಿಗೆ ಮಾತ್ರ ನಿಯಮ ಇರುವುದಲ್ಲ. ಯಕ್ಷಗಾನ ಮತ್ತಿತರ ಧಾರ್ಮಿಕ ಚಟುವಟಿಕೆಗಳು ನಡೆಯುವಾಗಲೂ ಒಂದೇ ರೀತಿಯ ಕಾನೂನು ಅನುಷ್ಠಾನವಾಗಬೇಕು ಎಂದು ಹೇಳಿದರು. ಸರಕಾರ ಮತ್ತು ನ್ಯಾಯಾಲಯದ ಆದೇಶವನ್ನು ಎಲ್ಲ ಮಸೀದಿಗಳು ಪಾಲಿಸಲಿವೆ ಎಂದು ಇಬ್ರಾಹಿಂ ಸಾಹೇಬ್ ಹೇಳಿದ್ದಾರೆ.
PublicNext
13/05/2022 12:20 pm