ವಿಟ್ಲ: ದಕ್ಷಿಣ ಭಾರತದ ಸುಪ್ರಸಿದ್ದ ಝಿಯಾರತ್ ಕೇಂದ್ರವಾದ ಕೇರಳದ ಮಡವೂರು ಸಿ.ಎಂ ಮಖಾಂ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ವಲಿಯುಲ್ಲಾಹಿ ಸಿ.ಎಂ ಮಹಮ್ಮದ್ ಅಬೂಬಕ್ಕರ್ ಮುಸ್ಲಿಯಾರ್ ಅವರ 32ನೇ ಉರೂಸ್ ಮುಬಾರಕ್ ಮೇ 5 ರಂದು ಪ್ರಾರಂಭಗೊಂಡಿದ್ದು, ಮೇ 10 ರ ವರೆಗೆ ನಡೆಯಲಿದೆ ಎಂದು ಅನಿಲಕಟ್ಟೆ ಸಿ.ಎಂ ಮಡವೂರು ಎಜ್ಯುಕೇಶನ್ ಮತ್ತು ಕಲ್ಚಿರಲ್ ಕಾಂಪ್ಲೆಕ್ಸ್ ಜತೆ ಕನ್ವಿನರ್ ಅಬೂಬಕ್ಕರ್ ಅನಿಲಕಟ್ಟೆ ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಖಾಂ ಝಿಯಾರತ್, ಧ್ವಜರೋಹಣ, ಖತ್ಮುಲ್ ಕುರ್ ಆನ್, ಸ್ವಲಾತ್ ಮಜ್ಲಿಸ್, ಮಜ್ಲಿಸುನ್ನೂರು, ಮತಪ್ರಭಾಷಣ, ಅನುಸ್ಮರಣೆ , ದಿಕ್ರ್, ದುಆ ಸಮ್ಮೇಳನ, ಅನ್ನದಾನ ಮುಂತಾದ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮೇ 10 ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ರ ತನಕ ಅನ್ನದಾನ ನಡೆಯಲಿದೆ ಎಂದ ಅವರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭ ಸಯ್ಯದ್ ಹುಸೈನ್ ಬಾಅಲವಿ ತಂಙಳ್ , ಅನಿಲಕಟ್ಟೆ ಮಡವೂರ್ ಸಿ.ಎಂ.ಎಜುಕೇಶನ್ ಅ್ಯಂಡ್ ಕಲ್ಚರಲ್ ಕಾಂಪ್ಲೆಕ್ಸ್ ನ ಕನ್ವಿನರ್ ಪಿ.ಎ ಮುಹಮ್ಮದ್ ಮುಸ್ಲಿಯಾರ್, ಜತೆ ಕನ್ವಿನರ್ ಕೆ.ಎ ಹಸೈನಾರ್ ಮುಸ್ಲಿಯಾರ್, ಮುಹಮ್ಮದ್ ಮುಸ್ಲಿಯಾರ್, ಉಪಸ್ಥಿತರಿದ್ದರು.
Kshetra Samachara
05/05/2022 07:05 pm