ಉಡುಪಿ: ಪ್ರತಿ ಹಿಂದುಗಳೂ ತಮ್ಮ ಮನೆಯಲ್ಲಿ ಶಸ್ತ್ರವನ್ನು ಇಟ್ಟುಕೊಳ್ಳಬೇಕು ಎಂದು ಧರ್ಮ ಮತ್ತು ನಮ್ಮ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ.
ಉಡುಪಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಇದನ್ನು ನಮ್ಮ ಶಾಸ್ತ್ರ ಕೂಡ ಹೇಳಿದೆ ನಮ್ಮ ಸ್ವಯಂ ರಕ್ಷಣೆಗಾಗಿ ಶಸ್ತ್ರವನ್ನು ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ. ಹಾಗಂತ ಈ ಶಾಸ್ತ್ರವನ್ನು ನಾವು ಯಾರ ಮೇಲೂ ಉಪಯೋಗಿಸುವುದಿಲ್ಲ.
ಶತ್ರುಗಳು ನಮ್ಮನ್ನು ಆಕ್ರಮಿಸಲು ಬಂದಾಗ, ಆಕ್ರಮಣಕ್ಕೆ ಬಂದಾಗ ಇದನ್ನು ನಾವು ಉಪಯೋಗಿಸಬೇಕು. ನಾವಿಲ್ಲದಿದ್ದರೆ ಅಥವಾ ನಾವು ಸತ್ತ ಮೇಲೆ ಯಾವ ಧರ್ಮರಕ್ಷಣಯೂ ಆಗುವುದಿಲ್ಲ.ಹಾಗಾಗಿ ನಾವು ಇರುವಾಗಲೇ ಎಲ್ಲ ಹಿಂದೂಗಳು ಕೂಡ ಮನೆಯಲ್ಲಿ ಶಸ್ತ್ರವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
PublicNext
29/04/2022 06:40 pm