ಮುಲ್ಕಿ: ಮುಲ್ಕಿ ಸಮೀಪದ ಕುಬೆವೂರು ಶ್ರೀ ಜಾರಂದಾಯ ದೇವಸ್ಥಾನದಲ್ಲಿ ಶ್ರೀ ಜಾರಂದಾಯ ದೈವದ ವರ್ಷಾವಧಿ ನೇಮೋತ್ಸವದ ಪೂರ್ವಭಾವಿಯಾಗಿ ಧ್ವಜಾರೋಹಣ ಹಾಗೂ ದೀಪಾರಾಧನೆ ಬಲಿ ವಿಜೃಂಭಣೆಯಿಂದ ನಡೆಯಿತು.
ನೇಮೋತ್ಸವದ ಪ್ರಯುಕ್ತ ಶುಕ್ರವಾರ ಸಂಜೆ 5 ಗಂಟೆಗೆ ಕುಬೇರಗುತ್ತು ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಆಗಮನ ಕಾರ್ಯಕ್ರಮ, ಬಳಿಕ ಧ್ವಜಾರೋಹಣ ಹಾಗೂ ದೀಪಾರಾಧನೆ ಬಲಿ ನಡೆಯಿತು.
ಈ ಸಂದರ್ಭ ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ,ಕೆಂಚನಕೆರೆ,ಗೌರವಾಧ್ಯಕ್ಷ ಮುರಳೀಧರ್ ಭಂಡಾರಿ,ಅಶ್ವಿನ್ ಆಳ್ವ,ಶ್ರೀಕಾಂತ್ ಶೆಟ್ಟಿ ಕೆಂಚನಕೆರೆ,ದಿವಾಕರ ಶೆಟ್ಟಿ,ಶ್ರೀ ಜಾರಂದಾಯ ಮಿತ್ರ ಮಂಡಳಿ ಅಧ್ಯಕ್ಷ ಪ್ರಕಾಶ್ , ಎಎಸ್ಐ ಚಂದ್ರಶೇಖರ್ , ಮಹಿಳಾ ಮಂಡಳಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಶನಿವಾರ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಶ್ರೀ ಜಾರಂದಾಯ ಹಾಗೂ ಬಂಟ ದೈವದ ನೇಮೋತ್ಸವ ನಡೆಯಲಿದೆ.
Kshetra Samachara
22/04/2022 10:43 pm