ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ , ಚಿನ್ನದ ರಥೋತ್ಸವ ಕಣ್ತುಂಬಿಸಿಕೊಂಡ‌ ಭಕ್ತರು

ಮಂಗಳೂರು: ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಜಾತ್ರಾ ಮಹೋತ್ಸವ ವೈಭವದಿಂದ

ನಡೆಯುತ್ತಿದೆ.ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಭಾಗ್ಯ ಪಡೆಯುತ್ತಿದ್ದಾರೆ.

ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ದಿನ ವಿಶೇಷ ಪೂಜೆಗಳು, ವೈದಿಕ

ಉತ್ಸವಗಳು ನಡೆಯುತ್ತದೆ. ನಿನ್ನೆ ರಾತ್ರಿ ಅಮ್ಮನವರಿಗೆ ಸಂಧ್ಯಾ ಕಾಲದ ಪೂಜೆ ನೆರವೇರಿಸಿದ ಬಳಿಕ ದೇವರ ಉತ್ಸವ ಬಲಿ ಹೊರಟು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಚಿನ್ನದ ರಥೋತ್ಸವ, ಚಿನ್ನ ಪಲ್ಲಕ್ಕಿ ಉತ್ಸವ ನಡೆಯಿತು.

ದೇವಸ್ಥಾನದ ಒಂದು ಸುತ್ತು ಚಿನ್ನದ ರಥವನ್ನು ಎಳೆಯಲಾಯಿತು.ಈ ಸಂದರ್ಭದಲ್ಲಿ ಚೆಂಡೆ ಸುತ್ತು, ಯಕ್ಷಗಾನ, ಭರತನಾಟ್ಯ ಪ್ರದರ್ಶಿಸಿ ದೇವರಿಗೆ ಸೇವೆಯನ್ನು ಸಲ್ಲಿಸಿದ್ರು.ದೇವರ ವಾರ್ಷಿಕ ಉತ್ಸವದಲ್ಲಿ ಭಾಗಿಯಾದ ಸಹಸ್ರಾರು ಮಂದಿ ಭಕ್ತರು ಚಿನ್ನದ ರಥೋತ್ಸವನ್ನು ಕಣ್ತುಂಬಿಸಿಕೊಂಡರು.

Edited By : Shivu K
Kshetra Samachara

Kshetra Samachara

20/04/2022 11:56 am

Cinque Terre

9.18 K

Cinque Terre

0

ಸಂಬಂಧಿತ ಸುದ್ದಿ