ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಹಾಗೂ ಸುಡುಮದ್ದು ಪ್ರದರ್ಶನ ವಿಜೃಂಭಣೆಯಿಂದ ನಡೆಯಿತು.
ಶ್ರೀದೇವರ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ, ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ ನಡೆಯಿತು.
ರಾತ್ರಿ7.30ಕ್ಕೆ ಶ್ರೀ ದೇವರ ಉತ್ಸವ ಪ್ರಾರಂಭವಾಗಿ ಸುಡುಮದ್ದು (ಪುತ್ತೂರು ಬೆಡಿ) ಪ್ರದರ್ಶನ ನಡೆಯಿತು. ಲಕ್ಷಾಂತರ ಮಂದಿ ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿದರು.
ಬಳಿಕ ಶ್ರೀದೇವರ ಬಂಗಾರ್ ಕಾಯರ್ ಕಟ್ಟೆ ಸವಾರಿ , ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನೋತ್ಸವ ನಡೆಯಿತು.
ಎ.18 ಸೋಮವಾರ ಕವಾಟೋದ್ಘಾಟನೆ, ತುಲಾಭಾರ ಸೇವೆ, ಸಂಜೆ ಶ್ರೀದೇವರ ವೀರಮಂಗಲ ಅವಭೃತ ಸ್ನಾನಕ್ಕೆ ಸವಾರಿ ನಡೆಯಿತು. ಎ.19 ಮಂಗಳವಾರ ಧ್ವಜಾವರೋಹಣ ನಡೆಯಲಿದೆ.
Kshetra Samachara
18/04/2022 04:15 pm