ಕಾಪು: ಇಲ್ಲಿ ಕಳೆದ 17 ವರ್ಷಗಳಿಂದ ಗೋವಿಗಾಗಿ ಮೇವು ಕಾರ್ಯಕ್ರಮ ನಡೆಯುತ್ತಿದೆ. ಪೇಜಾವರ ಶ್ರೀಗಳ ವಿಶೇಷ ಮುತುವರ್ಜಿಯಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಗೋವುಗಳ ಹಸಿವು ತಣಿಸುವ ಪುಣ್ಯದ ಕೆಲಸವೂ ಹೌದು.
ಕುಂಜಾರುಗಿರಿಯಲ್ಲಿ ಸ್ವತಃ ಶ್ರೀಗಳೇ ಗದ್ದೆಗಿಳಿದು ಶ್ರಮದಾನ ಮಾಡಿದ್ದು ವಿಶೇಷವಾಗಿತ್ತು. ಸುಮಾರು ಒಂದು ಟನ್ ನಷ್ಟು ಹುಲ್ಲು ಸಂಗ್ರಹಿಸಿ ಗೋಶಾಲೆಗೆ ನೀಡಲಾಯಿತು. ಶ್ರೀಗಳ ಪ್ರೇರಣೆ ಪಡೆದ ಹಲವು ಯುವಕರು ಜಿಲ್ಲೆಯ ಹಲವೆಡೆ ಗೋವಿಗಾಗಿ ಮೇವು ಕಾರ್ಯಕ್ರಮ ಆಯೋಜಿಸಿ ಗೋವುಗಳ ಹಸಿವನ್ನು ತಣಿಸುವ ಕಾರ್ಯ ಮಾಡುತ್ತಿದ್ದಾರೆ.
Kshetra Samachara
18/04/2022 12:26 pm