ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸಲಾಂ ಮಂಗಳಾರತಿಯಿಂದ ದೇವರಿಗೆ ಅವಮಾನ: ಕಲ್ಲಡ್ಕ ಪ್ರಭಾಕರ ಭಟ್

ಬೈಂದೂರು: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಸಲಾಂ ಮಂಗಳಾರತಿ ಕಳೆದ ಕೆಲವು ದಿನಗಳಿಂದ ವಿವಾದದ ಕಿಡಿ ಎಬ್ಬಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಸಲಾಂ ಮಂಗಳಾರತಿಯಿಂದಾಗಿ ನಮ್ಮ ದೇವರಿಗೆ ನಾವೇ ಅವಮಾನ ಮಾಡಿದಂತೆ. ಅದನ್ನು ಮೊದಲು ತೆಗೆಯಿರಿ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನಿಂದ ಅದು ನಡೆದುಕೊಂಡು ಬಂದಿರಬಹುದು. ಇನ್ನು ಮುಂದೆ ಬೇಡ. ದೇವಸ್ಥಾನ, ನಮ್ಮ ವ್ಯವಸ್ಥೆ ಎಲ್ಲ ಕಡೆ ನಮ್ಮತನವೇ ಇರಲಿ. ಸಲಾಮ್ ಅವರು ಮಾಡುತ್ತಿರಲಿ. ನಮಗೆ ಬೇಡ. ಹಿಂದೂಗಳನ್ನು ನಾಶ ಮಾಡಲು ಹೊರಟವರ ಹೆಸರಿನಲ್ಲಿ ಯಾವುದೇ ಪೂಜೆ ಬೇಡ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

29/03/2022 10:24 am

Cinque Terre

9.67 K

Cinque Terre

6

ಸಂಬಂಧಿತ ಸುದ್ದಿ