ಮುಲ್ಕಿ: ಬೆಂಗಳೂರಿನ ಅಂತರರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ನೇಮೋತ್ಸವದ ಸಂಭ್ರಮದಲ್ಲಿರುವ ಮುಲ್ಕಿಯ ಕಾರಣಿಕ ಕ್ಷೇತ್ರವಾದ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಅವರು ದೈವಸ್ಥಾನದ ಅಭಿವೃದ್ಧಿ ಹಾಗೂ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿ, ದೈವಸ್ಥಾನದ ಅಭಿವೃದ್ಧಿಗೆ ಕ್ಷೇತ್ರದ ಭಕ್ತರ ಕೊಡುಗೆ ಅನನ್ಯವಾಗಿದ್ದು ಭಕ್ತರ ಇಷ್ಟಾರ್ಥ ಸಿದ್ಧಿ ಆಗಲಿ ಎಂದು ಆಶೀರ್ವಚನ ನೀಡಿದರು.
ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಶ್ರೀ ಚಂದ್ರಶೇಖರ ಸ್ವಾಮೀಜಿ ಯವರನ್ನು ಗೌರವಿಸಲಾಯಿತು. ಜ್ಯೋತಿಷಿ ವಿಶ್ವನಾಥ ಭಟ್, ಮಾತೃಶ್ರೀ ಶಾರದಮ್ಮ, ಉಷಾ ಭಟ್, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ಸಂಚಾಲಕ ಪುನೀತ್ ಕೃಷ್ಣ, ದೈವಸ್ಥಾನದ ಗುರಿಕಾರ ಡಾ. ಪಿ ಹರಿಶ್ಚಂದ್ರ ಸಾಲ್ಯಾನ್, ಕೃಷ್ಣ ಆರ್ ಕೋಟ್ಯಾನ್ ಸಾನದ ಮನೆ, ಸೇವಾ ಸಮಿತಿ ಅಧ್ಯಕ್ಷ ಪ್ರಕಾಶ್ ಸುವರ್ಣ ಉಪಸ್ಥಿತರಿದ್ದರು.
Kshetra Samachara
29/03/2022 07:29 am