ಕೊಲ್ಲೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಶ್ರದ್ಧಾಕೇಂದ್ರ ಕೊಲ್ಲೂರು ದೇವಸ್ಥಾನದಲ್ಲಿ ನಡೆಯುತ್ತಿತ್ತು ಎನ್ನಲಾದ ಸಲಾಂ ಮಂಗಳಾರತಿ ವಿವಾದಕ್ಕೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ತೆರೆ ಎಳೆದಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಸಲಾಂ ಹೆಸರಿನಲ್ಲಿ ಯಾವುದೇ ಮಂಗಳಾರತಿ ನಡೆಯುತ್ತಿಲ್ಲ. ಈ ಬಗ್ಗೆ ಭಕ್ತರಿಗೆ ಸ್ಪಷ್ಟಪಡಿಸುತ್ತಿದ್ದೇವೆ. ನಾವು ಮಾಡುತ್ತಿರುವುದು ಪ್ರದೋಷ ಕಾಲದ ಮಂಗಳಾರತಿ. ಅದನ್ನು ಸಲಾಂ ಮಂಗಳಾರತಿ ಎಂದು ಕರೆಯುತ್ತಿರಬಹುದು. ಆದರೆ ಅದನ್ನು ಟಿಪ್ಪು ನೆನಪಿಗಾಗಿ ಮಾಡುತ್ತಿರುವ ಯಾವುದೇ ಲಿಖಿತ ದಾಖಲೆಗಳಿಲ್ಲ. ಹೀಗಾಗಿ ಭಕ್ತರು ಗೊಂದಲಕ್ಕೆ ಈಡಾಗಬಾರದು ಎಂದು ಮನವಿ ಮಾಡಿದ್ದಾರೆ.
PublicNext
28/03/2022 09:04 pm