ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಪ್ಪನಾಡು: ಶ್ರೀದೇವಿ ದೋಣಿ ಯಾನ, ಜಳಕೋತ್ಸವ ಸಂಭ್ರಮ; ಜಾತ್ರೆ ಸಮಾಪನ

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಜಳಕೋತ್ಸವ ವಿಧಿವಿಧಾನ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಬಳಿಕ ಶ್ರೀ ದೇವರು ಜಳಕಕ್ಕೆ ದೋಣಿಯಲ್ಲಿ ತೆರಳುವುದನ್ನು ನೋಡುವುದೇ ಚೆಂದ! ಶ್ರೀ ದೇವಿ ಹಾಗೂ ಸಸಿಹಿತ್ಲು ಭಗವತಿಯರು ದೋಣಿಗಳಲ್ಲಿ ದೂರದ ಚಂದ್ರ ಶಾನುಭಾಗಕುದ್ರುವಿನ ದೇವಸ್ಥಾನದ ಕೆರೆಗೆ ತೆರಳಿ ಶ್ರೀ ದೇವರಿಗೆ ಜಳಕ ನಡೆದು ವಿಶೇಷ ಪೂಜೆ ಜರುಗಿತು.

ಬಳಿಕ ದೇವರು ವಾಪಸ್ ದೋಣಿಯಲ್ಲಿ ಬಂದು ವಿಮಾನ ರಥದ ಮೂಲಕ ಕಟ್ಟೆಪೂಜೆಯಾಗಿ ದೇವಸ್ಥಾನದಲ್ಲಿ ಜಳಕದ ಬಲಿ, ಅವಭೃತ, ಧ್ವಜಾವರೋಹಣ, ಭಕ್ತಾದಿಗಳಿಂದ ಹಣ್ಣುಕಾಯಿ ಸೇವೆ, ಮಹಾ ಮಂತ್ರಾಕ್ಷತೆ ನಡೆದು ಜಾತ್ರಾ ಮಹೋತ್ಸವ ಸಮಾಪನಗೊಂಡಿತು.

ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು, ವೇಮೂ ವಾದಿರಾಜ ಉಪಾಧ್ಯಾಯ, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಸುನಿಲ್ ಆಳ್ವ, ವೆಂಕಟೇಶ ಹೆಬ್ಬಾರ್, ನಾಗೇಶ್ ಬಪ್ಪನಾಡು, ಚಂದ್ರಶೇಖರ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

26/03/2022 10:05 am

Cinque Terre

14.07 K

Cinque Terre

1

ಸಂಬಂಧಿತ ಸುದ್ದಿ