ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಂಗಳಾದೇವಿಯಲ್ಲಿ ಜಾತ್ರ ಮಹೋತ್ಸವ ಸಂಪನ್ನ..

ಮಂಗಳೂರು: ನಗರದ ಪ್ರಸಿದ್ಧ ಕ್ಷೇತ್ರ ಮಂಗಳಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ. ಒಟ್ಟು ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವದಲ್ಲಿ ದೇವರಿಗೆ ವೈದಿಕ ಪೂಜಾ ವಿಧಿಗಳನ್ನು ನಡೆಸಲಾಯಿತು.

ಗುರುವಾರ ರಾತ್ರಿ ದೇವರ ಅದ್ದೂರಿ ರಥೋತ್ಸವವನ್ನು ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು. ಗರ್ಭಗುಡಿಯಲ್ಲಿ ದೇವಿಗೆ ವಿಶೇಷ ಪೂಜೆ ನೇರೆವೆರಿಸಲಾಯಿತು. ಬಳಿಕ ಮಂಗಳಾದೇವಿ ರಥರೂಢಾಳಾಗಿ ಭಕ್ತರಿಗೆ ದರ್ಶನ ನೀಡಿದ್ರು. ಇನ್ನೂ ರಥೋತ್ಸವ ಮೆರವಣಿಗೆಯಲ್ಲಿ ಹುಲಿ ವೇಷ, ಚೆಂಡೆ,ವಾದ್ಯಗೋಷ್ಠಿ, ಪೌರಾಣಿಕ ಕಥೆಯನ್ನು ಒಳಗೊಂಡ ಸ್ತಬ್ಧ ಚಿತ್ರ ಟ್ಯಾಬ್ಲೊಗಳು,ಗೊಂಬೆಗಳ ಕುಣಿತ ಎಲ್ಲರ ಗಮನ ಸೆಳೆದವು. ಭಕ್ತರು ದೇವರ ರಥವನ್ನು ಎಳೆದು ಪುನೀತರಾದರು.

Edited By : Shivu K
Kshetra Samachara

Kshetra Samachara

25/03/2022 08:53 pm

Cinque Terre

12.69 K

Cinque Terre

1

ಸಂಬಂಧಿತ ಸುದ್ದಿ