ಉಡುಪಿ : ಕರಾವಳಿಯಲ್ಲಿ ಒಂದು ಕೋಮಿನವರ ಮೇಲೆ ನಡೆಯುತ್ತಿರುವ ಆರ್ಥಿಕ / ವ್ಯಾಪಾರ ಬಹಿಷ್ಕಾರ ಮುಂದುವರೆಯದೆ ಅದು ಬೇಗ ಕೊನೆಗೊಳ್ಳಬೇಕು ಎಂದು ರಾಜಕೀಯ ವಿಶ್ಲೇಷಕ ,ಪ್ರೊ.ಸುರೇಂದ್ರನಾಥ್ ಶೆಟ್ಡಿ ಹೇಳಿದ್ದಾರೆ.
ಈ ಕುರಿತು ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಹಿಂದೂ ಮುಸ್ಲಿಂ ಕ್ರೈಸ್ತರು ಪರಸ್ಪರ ವ್ಯಾಪಾರ ಕೊಡು ಕೊಳ್ಳುವಿಕೆಯಿಂದ ಬಾಳುತ್ತಿರುವ ಊರು ಕರಾವಳಿ.ಆದರೆ ಇಲ್ಲಿ ಮನಸುಗಳು ಒಡೆಯುತ್ತಿರುವುದು ನೋವಿನ ಸಂಗತಿ.
ಚರ್ಚು ಮಸೀದಿ ದೇವಸ್ಥಾನಗಳ ಉತ್ಸವಗಳಲ್ಲಿ ಪಾಲ್ಗೊಂಡು ಪರಸ್ಪರ ವ್ಯಾಪಾರ ನಡೆಸುತ್ತಿದ್ದ ಜನರಿಗೆ ಇದರಿಂದ ಬೇಸರವಾಗಿದೆ.ಈ ಎಲ್ಲ ಬಹಿಷ್ಕಾರ ದ ಬಲಿಪಶುಗಳು ಬಡವರೇ ಆಗಿದ್ದಾರೆ.
ಹೀಗಾಗಿ ರಾಜಕಾರಣಿಗಳನ್ನು ಬದಿಗಿಟ್ಟು ಸೌಹಾರ್ದದ ವೇದಿಕೆ ಸಜ್ಜುಗೊಳಿಸುವ ಕೆಲಸ ಆಗಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
25/03/2022 03:08 pm