ಕಾಪು: ತುಳುನಾಡಿನ 7 ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮೂರು ಮಾರಿ ಗುಡಿಗಳಲ್ಲಿ ವೈಭವದಿಂದ ಬುಧವಾರ ಸಂಜೆ ಸಮಾಪನಗೊಂಡಿತು.
ಗದ್ದಿಗೆಯ ಪ್ರಧಾನವಾಗಿರುವ ಹಳೆ ಮಾರಿಗುಡಿ, ಹೊಸ ಮಾರಿಗುಡಿ, ಮೂರನೇ ಮಾರಿಗುಡಿಗಳಲ್ಲಿ ಮಂಗಳವಾರದಿಂದ ಬುಧವಾರದವರೆಗೆ ಅಧಿಕ ಸಂಖ್ಯೆಯ ಗದ್ದಿಗೆ ಪೂಜೆಯು ಸಮರ್ಪಿತ ಗೊಂಡಿದೆ.
ಊರು ಕೇರಿ ಮತ್ತು ಕುಟುಂಬಕ್ಕೆ ಬರುವ ಸಾಂಕ್ರಾಮಿಕ ರೋಗಗಳು, ಕಷ್ಟನಷ್ಟಗಳ ನಿವಾರಣೆಗಾಗಿ ಭಕ್ತಾದಿಗಳು ಮಾರಿಪೂಜೆ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಕುರಿ,ಕೋಳಿಗಳನ್ನು ಸಮರ್ಪಿಸುತ್ತಾರೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಲಕ್ಷಾಂತರ ಮಂದಿ ಸುಗ್ಗಿ ಮಾರಿಪೂಜೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.
Kshetra Samachara
23/03/2022 07:40 pm