ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೊಲ್ಲೂರು ಅಮ್ಮನ ಉತ್ಸವದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇದ!

ಕೊಲ್ಲೂರು: ಇದೇ ಶುಕ್ರವಾರದಂದು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉತ್ಸವ ನಡೆಯಲಿದ್ದು, ಅಲ್ಲೂ ಮುಸಲ್ಮಾನ ವ್ಯಾಪಾರಿಗಳಿಗೆ ನಿಷೇಧಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಿಂದೂ ಸಂಘಟನೆಗಳು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಈ ಸಂಬಂಧ ಮನವಿ ಸಲ್ಲಿಸಿವೆ.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸಂಧ್ಯಾ ರಮೇಶ್ ಕೂಡ ಹಿಂದೂ ಸಂಘಟನೆಗಳಿಗೆ ಸಾಥ್ ನೀಡಿದ್ದಾರೆ. ಈಗಾಗಲೇ ಕಾಪು ಮಾರಿ ಪೂಜೆಯಲ್ಲಿ ಹಿಂದೂಯೇತರರನ್ನು ವ್ಯಾಪಾರದಿಂದ ನಿಷೇಧಿಸಲಾಗಿದೆ. ಇದೀಗ ಕೊಲ್ಲೂರು ಉತ್ಸವದಲ್ಲೂ ನಿಷೇಧಿಸುವ ಅಭಿಯಾನ ಜೋರಾಗಿ ನಡೆಯುತ್ತದೆ. ಜಿಲ್ಲೆಯ ಮಂದಾರ್ತಿ ಜಾತ್ರೆಯಿಂದ ಈ ಆರ್ಥಿಕ ಅಸಹಕಾರದ ಅಭಿಯಾನ ಆರಂಭಗೊಂಡಿತ್ತು. ಈಗ ಜಿಲ್ಲೆಯ ಇತರೇ ದೇವಸ್ಥಾನಗಳಿಗೂ ಈ ಅಭಿಯಾನ ವ್ಯಾಪಿಸುತ್ತಿದೆ.

Edited By :
Kshetra Samachara

Kshetra Samachara

23/03/2022 06:22 pm

Cinque Terre

11.31 K

Cinque Terre

3

ಸಂಬಂಧಿತ ಸುದ್ದಿ