ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : "ನಮ್ಮ ಹೊಟ್ಟೆಗೆ ಹೊಡೆಯಬೇಡಿ" ಪಬ್ಲಿಕ್ ನೆಕ್ಸ್ಟ್ ಜೊತೆ ಮುಸ್ಲಿಂ ಬೀದಿ ವ್ಯಾಪಾರಸ್ಥರ ಅಳಲು

ವಿಶೇಷ ವರದಿ: ರಹೀಂ ಉಜಿರೆ

ಕಾಪು: ಹೇಳಿಕೇಳಿ ಉಡುಪಿ ಜಿಲ್ಲೆಯನ್ನು ದೇವಾಲಯಗಳ ನಗರಿ ಎಂದು ಕರೆಯುತ್ತಾರೆ. ಮಾರ್ಚ್, ಎಪ್ರಿಲ್ ತಿಂಗಳು ಬಂದರೆ ಪ್ರತಿದಿನ ಇಲ್ಲಿ ಯಾವುದಾದರೊಂದು ದೇವಸ್ಥಾನಗಳಲ್ಲಿ ಉತ್ಸವ, ಜಾತ್ರೆ ನಡೆಯುವುದು ಮಾಮೂಲು.ಆದರೆ ಹಿಂದೂ ದೇವಾಲಯಗಳ ಉತ್ಸವದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ಅವಕಾಶ ನೀಡಕೂಡದು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಲಕ್ಷಾಂತರ ಜನರು ಸೇರುವ ಮಾರಿಪೂಜೆ ನಡೆಯುತ್ತದೆ. ಮಾರಿ ಪೂಜೆ ವೇಳೆ ಸಾವಿರಾರು ವ್ಯಾಪಾರಿಗಳು ಭಾಗವಹಿಸುತ್ತಾರೆ. ಈ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವುದು ವಿಶೇಷ. ಆದರೆ ಈ ಬಾರಿ ಮುಸ್ಲಿಂ ವ್ಯಾಪಾರಿಗಳಿಗೆ ಜಾತ್ರೆಯಲ್ಲಿ ಅವಕಾಶ ನೀಡಕೂಡದು ಎಂದು ಹಿಂದೂ ಜಾಗರಣ ವೇದಿಕೆ ಒತ್ತಾಯಿಸಿದೆ.

ಇದಲ್ಲದೆ ಇದೀಗ ವಿವಿಧ ಜಾತ್ರೆಗಳಲ್ಲೂ ಬೀದಿ ವ್ಯಾಪಾರಸ್ಥರಿಗೆ ಇದೇ ರೀತಿ ವ್ಯಾಪಾರಕ್ಕೆ ಬಹಿಷ್ಕಾರ ಹಾಕುವ ಆತಂಕ ಎದುರಾಗಿದೆ.ಈ ಹಿನ್ನೆಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಬೀದಿ ವ್ಯಾಪಾರಸ್ಥರನ್ನು ಮಾತನಾಡಿಸಲು ಪ್ರಯತ್ನಿಸಿದೆ.

ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಬೀದಿ ವ್ಯಾಪಾರಸ್ಥರು ,ಕೊರೋನಾದಿಂದ ನಾವು ಸಾಕಷ್ಟು ಹೊಡೆತ ತಿಂದಿದ್ದೇವೆ.ನಾವು ಜಿಲ್ಲೆಯಾದ್ಯಂತ 680 ವ್ಯಾಪಾರಸ್ಥರಿದ್ದೇವೆ.ಇದರಲ್ಲಿ ಬಹುತೇಕರು ಮುಸ್ಲಿಮರೇ ಇದ್ದೇವೆ.ನಾವು ದೇವಸ್ಥಾನದ ಜಾತ್ರೆಗಳಲ್ಲೇ ವ್ಯಾಪಾರ ಮಾಡಿ ಬದುಕುವವರು.ಯಾವ ದೇವಸ್ಥಾನದಲ್ಲೂ ನಾವು ಕೆಟ್ಟ ಹೆಸರು ಪಡೆದುಕೊಂಡಿಲ್ಲ.ಆದ್ದರಿಂದ ಹಿಂದೂ ಸಂಘಟನೆಗಳು ನಮ್ಮ‌ ಮನವಿಯನ್ನು ಪುರಸ್ಕರಿಸಿ ನಮ್ಮನ್ನು ಹಿಂದೂ ಸಮಾಜದ ಜೊತೆ ಸೌಹಾರ್ದದಿಂದ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

Edited By :
Kshetra Samachara

Kshetra Samachara

21/03/2022 06:18 pm

Cinque Terre

22.04 K

Cinque Terre

15

ಸಂಬಂಧಿತ ಸುದ್ದಿ