ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ: ಮಾರ್ಚ್ 25ರಂದು ಪುಣಚ ಪರಿಯಾಲ್ತಡ್ಕ ಜುಮ್ಮಾ ಮಸೀದಿಯ ನವೀಕೃತ ಮಸೀದಿ ಉದ್ಘಾಟನಾ ಸಮಾರಂಭ

ವಿಟ್ಲ: ಪುಣಚ ಗ್ರಾಮದ ಪರಿಯಾಲ್ತಡ್ಕ ಮುಹ್‌ಯಿದ್ದೀನ್ ಜುಮಾ ಮಸೀದಿಯ ನವೀಕೃತ ಮಸೀದಿಯ ಉದ್ಘಾಟನಾ ಸಮಾರಂಭ ಮತ್ತು ಧಾರ್ಮಿಕ ಪ್ರವಚನ ಮಾರ್ಚ್ 25ರ ಶುಕ್ರವಾರ ಮಧ್ಯಾಹ್ನ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಎಂ.ಎಸ್ ಮಹಮ್ಮದ್ ತಿಳಿಸಿದರು.

ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ಅಂದಾಜು 80 ಲಕ್ಷ ರೂ. ವೆಚ್ಚದಲ್ಲಿ ಮಸೀದಿ ನಿರ್ಮಾಣಗೊಂಡಿದ್ದು, ಉದ್ಘಾಟನಾ ಸಮಾರಂಭಕ್ಕೆ ಸರ್ವ ಧರ್ಮದ ಮುಖಂಡರನ್ನು ಆಹ್ವಾನಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಕೆ.ಎಸ್ ಅಲಿ ತಂಙಳ್ ಕುಂಬೋಳ್ ಮಸೀದಿಯನ್ನು ಉದ್ಘಾಟಿಸಲಿದ್ದಾರೆ.

ಮಂಗಳೂರು ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ವಕ್ಫ್ ನಿರ್ವಹಣೆ ಮಾಡಲಿದ್ದಾರೆ. ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಆಶೀರ್ವಚನ ನೀಡಲಿದ್ದಾರೆ. ಇಬ್ರಾಹಿಂ ಪೂಕುಂಞ ತಂಙಳ್ ಉದ್ಯಾವರ ದುವಾ ದುವಾಃ ನಿರ್ವಹಿಸಲಿದ್ದಾರೆ. ಸೈಯದ್ ಮಹಮ್ಮದ್ ಶಾಫಿ ತಂಞಳ್ ಪಾನೂರ್ ಮತ್ತು ಮಹಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್ ಭಾಗವಹಿಸಲಿದ್ದಾರೆ ಎಂದರು.

ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭವನ್ನು ಪರಿಯಾಲ್ತಡ್ಕ ಜುಮ್ಮಾ ಮಸೀದಿ ಖತೀಬು ಹಸೈನಾರ್ ಫೈಝಿ ಉದ್ಘಾಟಿಸಲಿದ್ದಾರೆ. ರಾಜ್ಯ ವಕ್ಫ್ ಅಧ್ಯಕ್ಷ ಶಾಫಿ ಸ ಅದಿ ಮತ್ತು ಮತ್ತು ಪರಿಯಾಲ್ತಡ್ಕ ಜುಮ್ಮಾ ಮಸೀದಿ ಗೌರವಾಧ್ಯಕ್ಷ ಹಾಜಿ ಯು.ಟಿ ಮೂಸಕುಂಞ ಅವರನ್ನು ಸನ್ಮಾಸಲಾಗುವುದು ಎಂದರು.

Edited By : Manjunath H D
Kshetra Samachara

Kshetra Samachara

21/03/2022 01:35 pm

Cinque Terre

20.27 K

Cinque Terre

0

ಸಂಬಂಧಿತ ಸುದ್ದಿ