ಮುಲ್ಕಿ: ಮುಲ್ಕಿ ಸಮೀಪದ ಮಾನಂಪಾಡಿ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರಾ ಮಹೋತ್ಸವದ ಪ್ರಯುಕ್ತ ಬೆಳಿಗ್ಗೆ ವಿಶೇಷ ಪ್ರಾರ್ಥನೆ ನಡೆದು ಕಾರ್ನಾಡು ಕಟ್ಟೆಯಲ್ಲಿ ಶ್ರೀದೇವಿಯ ಪ್ರತಿಬಿಂಬ ಪ್ರತಿಷ್ಠೆ ನಡೆದು ವಿಶೇಷ ಪೂಜೆ ನಡೆಯಿತು.
ಸಂಜೆ 6 ಗಂಟೆಗೆ ಶ್ರೀದೇವಿಯ ಪ್ರತಿಬಿಂಬವನ್ನು ವಿಜ್ರಂಭಣೆಯಿಂದ ಕುಬೆವೂರು ಶ್ರೀ ಜಾರಂದಾಯ ಸೇವಾ ಮಿತ್ರಮಂಡಳಿ ರವರ ಭಜನೆ ಹಾಗೂ ಕಿನ್ನಿಗೋಳಿಯ ಶ್ರೀ ವೀರಭದ್ರ ಬಳಗದ ಚೆಂಡೆ ವಾದನದೊಂದಿಗೆ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ತರಲಾಯಿತು.
ರಾತ್ರಿ ಕ್ಷೇತ್ರದಲ್ಲಿ ಭಜನೆ ಬಳಿಕ ಮಹಾಗಣಪತಿ ದೇವರಿಗೆ ಪೂಜೆ, ಶ್ರೀ ವೀರಭದ್ರ ದೇವರಿಗೆ ರಂಗಪೂಜೆ, ಧೂಮಾವತಿ ದೈವದ ನೇಮೋತ್ಸವ, ಮಹಮ್ಮಾಯಿ ಸನ್ನಿಧಿಯಲ್ಲಿ ಮಹಾ ಪೂಜೆ ನಡೆದು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು .
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಪುರಂದರ ಶೆಟ್ಟಿಗಾರ್, ಗುರಿಕಾರರು ಉಪಸ್ಥಿತರಿದ್ದರು
Kshetra Samachara
16/03/2022 10:44 pm