ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡು ಶ್ರೀ ನಾಗದೇವರ ಮತ್ತು ಕೊರಗಜ್ಜ ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಮತ್ತು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ರಿ) ವತಿಯಿಂದ ಕಾರ್ನಾಡು ಸಣ್ಣ ಕೈಗಾರಿಕಾ ವಲಯದಲ್ಲಿ ಆರಾಧಿಸಲ್ಪಡುತ್ತಿರುವ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಪ್ರಾತಃಕಾಲ ಶ್ರೀ ನಾಗದೇವರಿಗೆ ನವಕ ಪ್ರಧಾನ ಹೋಮ ಆಶ್ಲೇಷ ಪೂಜೆ ಪಂಚಾಮೃತ ಅಭಿಷೇಕ ಮತ್ತು ತಂಬಿಲ ಸೇವೆ ನಡೆದು ರಾತ್ರಿ ಕೊರಗಜ್ಜ ದೈವದ ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು. ಸಾವಿರಾರು ಭಕ್ತಾದಿಗಳು ನೇಮೋತ್ಸವ ದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಶೇಖರ ಸಾಲ್ಯಾನ್, ಚೇತನ್ ಶೆಟ್ಟಿ, ಪ್ರಶಾಂತ್ ಕಾಂಚನ್, ರಂಗನಾಥ ಶೆಟ್ಟಿ, ಚೇತನ್ ಕೋಟ್ಯಾನ್, ರಾಮಮೂರ್ತಿ ಉಪಾಧ್ಯಾಯ, ದಿನೇಶ್ ಹೆಗ್ಡೆ ಮಾನಂಪಾಡಿ, ಉದಯ ಶೆಟ್ಟಿ ಅಧಿಧನ್, ಗಂಗಾಧರ ಶೆಟ್ಟಿ ಬೆರ್ಕೆ ತೋಟ ಕ್ಷೇತ್ರದ ಅರ್ಚಕ ಉಮೇಶ್ ಕೊಲ್ನಾಡು ಉಪಸ್ಥಿತರಿದ್ದರು.
Kshetra Samachara
10/03/2022 11:30 am