ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಟಪಾಡಿ ದೇವಿ ಸನ್ನಿಧಾನದಲ್ಲಿ ಡಕ್ಕೆ ಬಲಿ ಸೇವೆ ಸಂಪನ್ನ- ಸಹಸ್ರಾರು ಭಕ್ತರು ಭಾಗಿ

ಬ್ರಹ್ಮಾವರ: ಇಲ್ಲಿನ‌ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಉಂಗ್ರಪಳ್ಳಿ ಗರಡಿ ಮನೆ ಇದರ 40ನೇ ವಾರ್ಷಿಕೋತ್ಸವ ಮತ್ತು 15ನೇ ವರ್ಷದ ಪುನರ್‌ ಪ್ರತಿಷ್ಠೆಯ ವರ್ಧಂತ್ಯುತ್ಸವ ಸಂಪನ್ನಗೊಂಡಿತು. ಈ ಪ್ರಯುಕ್ತ ಶ್ರೀ ದೇವಿಯ ಬ್ರಹ್ಮ ಕಲಶಾಭಿಷೇಕ ಚಂಡಿಕಾ ಹೋಮ ಮತ್ತು ಬ್ರಹ್ಮಮಂಡಲ (ಡಕ್ಕೆ ಬಲಿ) ಸೇವೆಯು ನಡೆಯಿತು.

ಶ್ರೀದೇವಿಯ ಸನ್ನಿಧಾನದಲ್ಲಿ ಚಂಡಿಕಾ ಹೋಮ ನಡೆದ ಬಳಿಕ ಸರ್ವ ಭಕ್ತರ ಸಹಕಾರದೊಂದಿಗೆ ಸಾಮೂಹಿಕ ಹೂವಿನ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾ ಮಹಿಳಾ ಮಂಡಳಿ ಮಟಪಾಡಿ ಇವರಿಂದ ಲಲಿತಾ ಸಹಸ್ರನಾಮ ಸ್ತ್ರೋತ್ರ ಪಠಣ ಹಾಗೂ ಶ್ರೀ ರಾಮಚಂದ್ರ ಮಹಿಳಾ ಭಜನಾ ಮಂಡಳಿ ವತಿಯಿಂದ ಭಜನೆ ಜರುಗಿತು. ಬಳಿಕ ಶ್ರೀ ಚಂಡಿಕಾದುರ್ಗಾಪರಮೇಶ್ವರಿ ಭಜನಾ ಮಂಡಳಿ ಮಟಪಾಡಿ ಮತ್ತು ಬಾರ್ಕೂರು ಇವರಿಂದ ಕುಣಿತ ಭಜನೆ ಜರುಗಿತು.

ಧಾರ್ಮಿಕ ಕಾರ್ಯಕ್ರಮದ ಪ್ರಮುಖ ಅಂಗವಾಗಿ ನಾಗಬ್ರಹ್ಮ ಸ್ಥಾನದಲ್ಲಿ ಹಾಲಿಟ್ಟು ಸೇವೆ, ದೇವಿಯ ಸನ್ನಿಧಾನದಲ್ಲಿ ಬ್ರಹ್ಮಮಂಡಲ ಡಕ್ಕೆ ಬಲಿಯ ಸೇವೆಯು ಸಂಪನ್ನಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಕ್ಷೇತ್ರ ನೀಲಾವರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು. ಈ ಅಪೂರ್ವ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಪರವೂರಿನ ನೂರಾರು ಭಕ್ತಾದಿಗಳು ಭಾಗವಹಿಸಿ ದೇವರ ಅನುಗ್ರಹ ಪಡೆದುಕೊಂಡರು.

Edited By :
Kshetra Samachara

Kshetra Samachara

08/03/2022 06:39 pm

Cinque Terre

6.04 K

Cinque Terre

0

ಸಂಬಂಧಿತ ಸುದ್ದಿ