ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀ ಕೃಷ್ಣನ ರಥಬೀದಿಯಲ್ಲಿ ಶ್ರೀ ಅನಂತೇಶ್ವರ ರಥೋತ್ಸವ ಸೊಬಗು

ಉಡುಪಿ: ಕೃಷ್ಣನಗರಿ ಉಡುಪಿ ಎಂದರೆ ನೆನಪಾಗುವುದು ಇಲ್ಲಿನ ಗೋಪಾಲ. ಆದ್ರೂ ಕೃಷ್ಣ ನೆಲೆ‌ ನಿಲ್ಲಲು ಆಶ್ರಯ ಕೊಟ್ಟಿದ್ದು ಅನಂತೇಶ್ವರ. ಹೀಗಾಗಿ ಅನಂತೇಶ್ವರನಿಗೂ ವಿಶೇಷ ಸ್ಥಾನಮಾನವಿದೆ. ಉಡುಪಿಯಲ್ಲಿ ಪ್ರತೀ ವರ್ಷ ಶ್ರೀ ಅನಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.

ಇದು ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥಾನವೂ ಹೌದು. ಇಲ್ಲಿ ಆರಾಧನೆಗೊಳ್ಳುತ್ತಿರುವ ಮುಖ್ಯ ದೇವರು ಅನಂತೇಶ್ವರನ ರೂಪದಲ್ಲಿರುವ ಶ್ರೀನಾರಾಯಣ. ಅನಂತೇಶ್ವರನು ಲಿಂಗದ ರೂಪದಲ್ಲಿ ಪೂಜೆಗೊಳ್ಳುತ್ತಿರುವುದು ವಿಶೇಷ. ಅನಂತೇಶ್ವರ ದೇವರಿಗೆ ಶಿವರಾತ್ರಿ ಸಂದರ್ಭ ವಿಶೇಷ ಪೂಜೆ ನಡೆದು, ನಂತರದ ದಿನಗಳಲ್ಲಿ ಅನಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.

ಅದರಲ್ಲೂ ಮುಖ್ಯವಾಗಿ, ಅನಂತೇಶ್ವರ ಉತ್ಸವದಂದು ನಡೆಯುವ ದೇವಸ್ಥಾನದ ಹೂವಿನ ಅಲಂಕಾರ ಕಣ್ಣಿಗೆ ಹಬ್ಬ. ವಿವಿಧ ಬಗೆಯ ಹೂಗಳನ್ನು ಬಳಸಿ ದೇಗುಲವನ್ನು ಸಿಂಗಾರ ಮಾಡಲಾಗುತ್ತದೆ. ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಯನ್ನು ರಥಬೀದಿಯಲ್ಲಿ ಮೆರವಣಿಗೆ ಮೂಲಕ ಪ್ರದಕ್ಷಿಣೆ ಹಾಕಿ ಬಳಿಕ ರಥದಲ್ಲಿ ಇರಿಸಿ ರಥೋತ್ಸವ ನಡೆಸಲಾಗುತ್ತದೆ.

ಈ ಬಾರಿಯ ಉತ್ಸವದಲ್ಲಿ ಪುತ್ತಿಗೆ ಶ್ರೀಗಳು ಹಾಗೂ ಕಣಿಯೂರು ಶ್ರೀಗಳು ಪಾಲ್ಗೊಂಡಿದ್ದರು.

ಅನಂತೇಶ್ವರ ರಥೋತ್ಸವ ಕಂಡು ಸಾವಿರಾರು ಭಕ್ತರು ಪುನೀತರಾದರು. ಈ ಬಾರಿ ಸ್ಥಳೀಯರು ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯದ ಭಕ್ತರು ಕೂಡ ರಥೋತ್ಸವವನ್ನು ಕಣ್ತುಂಬಿಕೊಂಡರು.

Edited By : Manjunath H D
Kshetra Samachara

Kshetra Samachara

05/03/2022 07:08 pm

Cinque Terre

14.34 K

Cinque Terre

1

ಸಂಬಂಧಿತ ಸುದ್ದಿ