ಮಂಗಳೂರು: ನಾಡಿನಾದ್ಯಂತ ಮಹಾಶಿವರಾತ್ರಿ ಸಂಭ್ರಮ ಸಡಗರ ಜೋರಾಗಿದ್ದು ಕರಾವಳಿಯ ವಿವಿಧ ಶಿವ ದೇಗುಲಗಳಲ್ಲಿ ಶಿವ ನಾಮಸ್ಮರಣೆ, ಭಜನೆ ಸಂಕೀರ್ತನೆ ಮೊಳಗಿದ್ದು ಮಂಗಳೂರು ನಗರದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ದೇವರಿಗೆ ಉಮಾಮಹೇಶ್ವರ ಹೋಮ,ಮಹಾರುದ್ರಾಭಿಷೇಕ ಶತ ಸೀಯಾಳಾಭಿಷೇಕ ಹಾಗೂ ವಿಶೇಷ ಮಹಾಪೂಜೆಯನ್ನು ನೆರವೇರಿಸಲಾಯಿತು. ಶಿವರಾತ್ರಿ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನದತ್ತ ಹೆಜ್ಜೆ ಹಾಕಿ ಭಕ್ತಿಪೂರ್ವಕವಾಗಿ ದೇವರ ದರ್ಶನ ಪಡೆದರು.
Kshetra Samachara
01/03/2022 09:03 pm