ಮುಲ್ಕಿ: ಮುಲ್ಕಿ ಸಮೀಪದ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಅರ್ಚಕ ಶಶಾಂಕ್ ಮುಚ್ಚಿಂತ್ತಾಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಆಹೋರಾತ್ರಿ ಭಜನಾ ಕಾರ್ಯಕ್ರಮಕ್ಕೆ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭ ಧರ್ಮದರ್ಶಿ ಹರಿಕೃಷ್ಣ ಪುನರೂರು, ಪಟೇಲ್ ವಿಶ್ವನಾಥ ರಾವ್, ದೇವಪ್ರಸಾದ್ ಪುನರೂರು, ಗೋಪಿನಾಥ ರಾವ್, ಸುಧಾಕರ್ ರಾವ್, ಸುರೇಶ್ರಾವ್ ನೀರಳಿಕೆ,ರಾಘವೇಂದ್ರರಾವ್ ಕೆರೆಕಾಡು, ರಮೇಶ್ ರಾವ್, ಪುರಂದರ ಶೆಟ್ಟಿಗಾರ್, ರವಿ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/03/2022 09:59 am