ಉಡುಪಿ: ಉಡುಪಿಯಲ್ಲಿ ನವೀಕರಿಸಿ ನಿರ್ಮಿಸುತ್ತಿರುವ ಶ್ರೀ ಜಗದ್ಗುರು ನಿತ್ಯಾನಂದ ಸ್ವಾಮಿ ಮಂದಿರ ಮಠದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಇಂದು ನಡೆಯಿತು. ಶ್ರೀ ಧಾಮ ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಮಾಣಿಲ ಇಲ್ಲಿನ ಮೋಹನದಾಸ ಸ್ವಾಮೀಜಿ , ದತ್ತಾಶ್ರಮ ಗೌರಿಗದ್ದೆ ಯ ಶ್ರೀ ವಿನಯ ಗುರೂಜಿ ಶಿಲಾನ್ಯಾಸ ಕಾರ್ಯಕ್ರಮದ ಅತಿಥಿಯಾಗಿದ್ದರು.
ಈ ಸಂದರ್ಭ ನವೀಕರಿಸಿ ನಿರ್ಮಿಸುತ್ತಿರುವ ಕಟ್ಟಡದ ಭೂಮಿ ಪೂಜೆ ನಡೆಸಲಾಯಿತು. ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಸಂಕಷ್ಟಿ ಗಣಹೋಮ ಏರ್ಪಡಿಸಲಾಗಿತ್ತು ಉಡುಪಿಯ ನಿತ್ಯಾನಂದ ಆಶ್ರಮ ಕಳೆದ ಹಲವಾರು ದಶಕಗಳಿಂದ ಭಕ್ತರು ಹಾಗೂ ಸಂತರ ಸೇವೆಯಲ್ಲಿ ನಿರತವಾಗಿದೆ.
ದೇವಾಲಯಗಳ ನಗರಿಗೆ ಬರುವ ಅನೇಕ ಸಾಧು ಸಂತರಿಗೆ ಊಟೋಪಚಾರ ಸಹಿತ ಆಶ್ರಯ ನೀಡಿದೆ. ನವೀಕೃತ ಕಟ್ಟಡದಲ್ಲಿ ಮತ್ತಷ್ಟು ವಿಸ್ತೃತ ರೀತಿಯಲ್ಲಿ ಭಕ್ತ ಹಾಗೂ ಬಡವರ ಜನರ ಸೇವೆ ಕೈಗೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಇಂದು ಯಕ್ಷಗಾನದ ಕಿರು ಪ್ರದರ್ಶನ ಏರ್ಪಡಿಸಲಾಗಿತ್ತು.
Kshetra Samachara
21/02/2022 06:03 pm