ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರಾರ: ಶ್ರೀ ಬಲವಾಂಡಿ ದೈವಸ್ಥಾನದ ಬಂಟ ಕಂಬ - ಧರ್ಮಚಾವಡಿ ,ರಾಜಾಂಗಣ ತೆರವು

ಬಜಪೆ: ಸಮೀಪದ ಶ್ರೀಕ್ಷೇತ್ರ ಪೆರಾರ ಶ್ರೀ ಬಲವಾಂಡಿ ದೈವಸ್ಥಾನದ ಬಂಟ ಕಂಬ-ಧರ್ಮಚಾವಡಿ ,ರಾಜಾಂಗಣ ತೆರವು ಕಾರ್ಯವು ಆದಿತ್ಯವಾರದಂದು ಪ್ರಾರಂಭಗೊಂಡಿತು.

ತೆರವು ಕಾರ್ಯಕ್ಕೆ ಪೂರ್ವಭಾವಿಯಾಗಿ ಅರಸು ಉಳ್ಳಾಯ ಬಲವಾಂಡಿ ಹಾಗೂ ಪಿಲಿಚಾಮುಂಡಿ ದೈವಗಳನ್ನು ಸಾಂಪ್ರದಾಯಿಕ ವಿಧಿಪೂರ್ವಕ ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು. ಕುಡುಪು ಬ್ರಹ್ಮಶ್ರೀ ಕೃಷ್ಣರಾಜ ತಂತ್ರಿಗಳ ನೇತೃತ್ವದಲ್ಲಿ ಮುಕ್ಕಾಲ್ದಿ ಕಾಮೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿಗಳು ನಡೆಯಿತು.

ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟುಗುತ್ತು ಗಂಗಾಧರ ರೈ,ನೂತನ ಮಧ್ಯಸ್ಥ(ಮದಿಪು)ಗಡಿಕಾರ ಪ್ರತಾಪ್ ಚಂದ್ರ ಶೆಟ್ಟಿ ಬೆರ್ನೊಟ್ಟುಗುತ್ತು ,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಡಾ.ವೈ ಭರತ್ ಶೆಟ್ಟಿ,ಸಮಿತಿಯ ಕಾರ್ಯಾಧ್ಯಕ್ಷ ಶಿವಾಜಿ ಶೆಟ್ಟಿ,ಕೊಳಕೆಬೈಲು,ಪಡುಪೆರಾರ ಗ್ರಾ.ಪಂ ಅಧ್ಯಕ್ಷೆ ಅಮಿತಾ ಮೋಹನ್ ಶೆಟ್ಟಿ,ಆಡಳಿತಾಧಿಕಾರಿ ಸಾಯೀಶ್ ಚೌಟ,ಜೀರ್ಣೊದ್ದಾರ ಸಮಿತಿಯ ಸದಸ್ಯರು,ಕ್ಷೇತ್ರಕ್ಕೆ ಸಂಬಂಧಿಸಿದ 16 ಗುತ್ತುಗಳ ,ಒಳಗುತ್ತುಗಳ ಪ್ರಮುಖರು,ಗ್ರಾ.ಪಂ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.

ನೂತನ ಬಂಟ ಕಂಬ - ಧರ್ಮಚಾವಡಿ ,ರಾಜಾಂಗಣದ ನಿರ್ಮಾಣಕ್ಕೆ ಫೆ.24 ಗುರುವಾರ ಬೆಳಿಗ್ಗೆ 8:30ಕ್ಕೆ ಧಾರ್ಮಿಕ ವಿಧಿಪೂರ್ವಕ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ .

Edited By : Manjunath H D
Kshetra Samachara

Kshetra Samachara

21/02/2022 02:44 pm

Cinque Terre

5.7 K

Cinque Terre

0

ಸಂಬಂಧಿತ ಸುದ್ದಿ