ಮುಲ್ಕಿ: ಮುಲ್ಕಿ ಸಮೀಪದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀದೇವರ ಪಂಜಿನಡ್ಕ ಸವಾರಿ ಹಾಗೂ ಬಲಿ ಉತ್ಸವ ಮತ್ತು ಚಂದ್ರಮಂಡಲ ರಥೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಪ್ರಾತಃಕಾಲ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆದು ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾಯಾಗ ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ದೇವರ ಉತ್ಸವ ಬಲಿ ಹೊರಟು ಪಂಜಿನಡ್ಕ ಸವಾರಿಯಲ್ಲಿ ಕೊಲಕಾಡಿ ಶ್ರೀ ಕುಂಜಾರುಗಿರಿ ದೇವಸ್ಥಾನದಲ್ಲಿ ಶ್ರೀದೇವರ ಮುಖಾಮುಖಿ ನಡೆದು ಎರಡು ದೇವರುಗಳಿಗೆ ಏಕಕಾಲದಲ್ಲಿ ಪೂಜೆ ನಡೆಯಿತು.
ಬಳಿಕ ದೇವಸ್ಥಾನದಲ್ಲಿ ಶ್ರೀ ದೇವರ ಚಕ್ರ ಬಲಿ ಉತ್ಸವ, ಚಂದ್ರಮಂಡಲ ರಥೋತ್ಸವ ಭಕ್ತಾದಿಗಳನ್ನು ರೋಮಾಂಚನಗೊಳಿಸಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ, ಮುಲ್ಕಿ ಠಾಣಾ ಎಎಸೈ ಚಂದ್ರಶೇಖರ್, ಶಿಮಂತೂರು ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ ಉಪಾಧ್ಯಕ್ಷ ಪ್ರವೀಣ್, ಜಯಕರ್ ಮುಂಬೈ ಉದಯಕುಮಾರ್ ಶೆಟ್ಟಿ ಅಧಿಧನ್ ಮುಲ್ಕಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
17/02/2022 11:09 pm