ವಿಟ್ಲ: ಒಡಿಯೂರು ಗುರುದೇವದತ್ತ ಸಂಸ್ಥಾನದ ವತಿಯಿಂದ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರೀ ದತ್ತಾಂಜನೇಯ ದೇವರ ಶ್ರೀ ಒಡಿಯೂರು ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಶ್ರೀ ದತ್ತಾಂಜನೇಯ ದೇವರ ರಥವು ಒಡಿಯೂರು ಸಂಸ್ಥಾನದಿಂದ ನವರತ್ನ ಸ್ವರ್ಣಪಾದುಕೆಗಳೊಂದಿಗೆ ಗ್ರಾಮ ದೈವಸ್ಥಾನ ಮಿತ್ತನಡ್ಕ ತೆರಳಿ, ಕನ್ಯಾನ ಪೇಟೆ ಸವಾರಿಯಾಗಿ ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಒಡಿಯೂರು ಸಂಸ್ಥಾನಕ್ಕೆ ಹಿಂತಿರುಗಿತು.
ಎರಡು ಗ್ರಾಮಗಳ ಸಂಗಮ ರಥೋತ್ಸವ: ಶ್ರೀಒಡಿಯೂರು ರಥಯಾತ್ರೆ ಕನ್ಯಾನ-ಕರೋಪಾಡಿ ಎರಡು ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಸುಮಾರು 12 ಕಿ.ಮೀ ಸಂಚರಿಸಿತು. ಭವ್ಯ ಶೋಭಾಯಾತ್ರೆಯಲ್ಲಿ ರಥಯಾತ್ರೆಯಲ್ಲಿ ಕೊಂಬು, ವಾದ್ಯ, ತಾಲೀಮ್, ವಿವಿಧ ಟ್ಯಾಬ್ಲೊ, ಸಿಡಿಮದ್ದು ಅತ್ಯಾಕರ್ಷಣೆಯಾಗಿತ್ತು. ನಾನಾ ಭಜನಾ ಮಂಡಳಿಗಳಿಂದ ಕುಣಿತ ಭಜನೆಯೊಂದಿಗೆ ರಥಯಾತ್ರೆ ಸಾಗಿತು. ವಿವಿಧ ಸ್ಥಬ್ಧ ಚಿತ್ರಗಳು ಶೋಭಾಯಾತ್ರೆಗೆ ಮೆರುಗು ನೀಡಿದವು.
ವಿಶೇಷ ಆಕರ್ಷಣೆಯಾಗಿ ಕನ್ಯಾನ ಶ್ರೀನಿತ್ಯಾನಂದ ಮಂದಿರದ ಬಳಿಯಲ್ಲಿ ಪಾವಂಜೆ ಮೇಳದವರಿಂದ ’ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು. ಮಿತ್ತನಡ್ಕ ಶ್ರೀ ಮಲರಾಯಿ ದೈವಸ್ಥಾನ ಬಳಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು.
Kshetra Samachara
12/02/2022 10:28 pm