ಉಡುಪಿ: ಶ್ರೀಕೃಷ್ಣಮಠಕ್ಕೆ,ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಗಮಿಸಿ ದೇವರ ದರ್ಶನ ಮಾಡಿದರು.
ಮಠಕ್ಕೆ ಆಗಮಿಸಿದ ಅವರನ್ನು ವಾದ್ಯಘೋಷದೊಂದಿಗೆ ಸ್ವಾಗತಿಸಿ,ಮಠದ ದಿವಾನರಾದ ವರದರಾಜ ಭಟ್ ಹಾಗೂ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬರಮಾಡಿಕೊಂಡು.ನಂತರ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್ ಎಚ್ ಮಂಜುನಾಥ್,ಜಿಲ್ಲಾ ನಿರ್ದೇಶಕ ಗಣೇಶ್, ಪ್ರಾದೇಶಿಕ ನಿರ್ದೇಶಕ ವಸಂತ್ ಸಾಲ್ಯಾನ್, ಆಪ್ತಕಾರ್ಯದರ್ಶಿ ವೀರು ಶೆಟ್ಟಿ,ವಿಷ್ಣು ಪಾಡಿಗಾರ್,ವಾಸುದೇವ ಪೆರಂಪಳ್ಳಿ,ಮುರಳಿ ಕಡೆಕಾರ್,ಗಣೇಶ್ ರಾವ್,ಗಂಗಾಧರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
12/02/2022 05:47 pm