ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಶ್ರೀ ಕುಮಾರಮಂಗಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಭ್ರಮದ ಬ್ರಹ್ಮಕಲಶೋತ್ಸವ

ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಕುಮಾರಮಂಗಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವಸ್ಥಾನದಲ್ಲಿ ಸೋಮವಾರ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಹಾಗೂ ವೇದಮೂರ್ತಿ ವಾದಿರಾಜ ಉಪಾಧ್ಯಾಯರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಿತು

ಫೆ. 6 ಆದಿತ್ಯವಾರ ಸಾಯಂಕಾಲ ಬ್ರಹ್ಮಕಲಶ ಮಂಡಲ ರಚನೆ ದುರ್ಗಾನಮಸ್ಕಾರ ಪೂಜೆ ಹಾಗೂ ಆಶ್ಲೇಷಾಬಲಿ ನಡೆಯಿತು

ಫೆ. 7 ಸೋಮವಾರ ಪ್ರಾತಃಕಾಲ5.30ರಿಂದ ಬ್ರಹ್ಮಕಲಶ ಅಧಿವಾಸ, ಅಧಿವಾಸ ಹೋಮಗಳು ನಡೆದು ಬೆಳಿಗ್ಗೆ 8 15ರ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಿತು

ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಚಂಡಿಕಾಹೋಮ ಅನ್ನಸಂತರ್ಪಣೆ ನಡೆಯಿತು.

ಕಟೀಲು ಕ್ಷೇತ್ರದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ವೆಂಕಟ್ರಮಣ ಆಸ್ರಣ್ಣ, ಶಾಸಕ ಉಮಾನಾಥ ಕೋಟ್ಯಾನ್,ಮಾಜೀ ಸಚಿವ ಅಭಯ ಚಂದ್ರಜೈನ್, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಬಿರುವೆರ್ ಕುಡ್ಲ ಮುಲ್ಕಿ ಘಟಕದ ಕಿಶೋರ್ ಸಾಲ್ಯಾನ್, ಮಂಡಲಾಧ್ಯಕ್ಷ ಸುನೀಲ್ ಆಳ್ವ, ಅವಿಭಾಜಿತ ದ.ಕ. ಉಡುಪಿ ಜಿಲ್ಲಾ ವಿಶ್ವಕರ್ಮದ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ದೇವಪ್ರಸಾದ್ ಪುನರೂರು, ಬಾಬಾ ರಂಜನ್ ಶೆಟ್ಟಿ ಮಜಲ ಗುತ್ತು ಮತ್ತಿತರರು ದೇವಳಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕಾಟಿಪಳ್ಳ ಶ್ರೀ ಗುರು ಚೈತನ್ಯ ನಮ್ಮ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ (ರಿ) ಪ್ರಾಯೋಜಕತ್ವದಲ್ಲಿ ಉಮೇಶ್ ಕೋಟ್ಯಾನ್ ವಾಮದಪದವು ನೇತೃತ್ವದ ಕಲಾತಂಡದಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಪಾಧ್ಯಕ್ಷ ಗೋಪಿನಾಥ ಪಡಂಗ, ಕಾರ್ಯದರ್ಶಿ ವಿಶ್ವನಾಥ ರಾವ್,

ಸಮಿತಿಯ ಚಂದ್ರಶೇಖರ ಮಯ್ಯ, ಜಯಕುಮಾರ್ ಮಯ್ಯ ಶಿವಪ್ರಸಾದ್ ಮಯ್ಯ, ಸತೀಶ್ ಆಚಾರ್ಯ, ರಂಜನ್ ಶೆಟ್ಟಿ ಕೆಂಪುಗುಡ್ಡೆ, ಸತೀಶ್ ಕಿಲ್ಪಾಡಿ,ಮಾಧವ ಪೂಜಾರಿ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ರಾತ್ರಿ ದೇವಸ್ಥಾನದಲ್ಲಿ ಮಹಾರಂಗಪೂಜೆ ಉತ್ಸವ ಬಲಿ ಮಹಾ ಮಂತ್ರಾಕ್ಷತೆ ಹಾಗೂ ಮಹಾಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.

Edited By : Manjunath H D
Kshetra Samachara

Kshetra Samachara

07/02/2022 01:13 pm

Cinque Terre

4.48 K

Cinque Terre

0