ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ವೈಭವದ ರಥೋತ್ಸವ, ಪೂರ್ವಾಂಗವಾಗಿ ಬ್ರಹ್ಮ ರಥ ಸಮರ್ಪಣೆ

ಮಂಗಳೂರು : ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ ಫೆ 7 ರಂದು ನಡೆಯಲಿದ್ದು ಇದರ ಪೂರ್ವಾಂಗ ಈ ಬಾರಿ ನೂತನ ಬ್ರಹ್ಮರಥ ನಿರ್ಮಾಣ ಗೊಂಡಿದ್ದು ಇದರ ಸಮರ್ಪಣಾ ಕಾರ್ಯಕ್ರಮ ಕಾರ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಬುಧವಾರ ಪೂರ್ವಾನ 12:44 ರ ಅಭಿಜಿನ್ ಮುಹೂರ್ತದಲ್ಲಿ ನೆರವೇರಿತು.

ಬೆಳಿಗ್ಗೆ ಶ್ರೀ ದೇವರ ಸನ್ನಿಧಾನದಲ್ಲಿ ಮಹಾ ಪ್ರಾರ್ಥನೆ ತದನಂತರ ವಿದ್ವತ್ ವೈದಿಕರಿಂದ ಯಾಗ ಶಾಲೆಯಲ್ಲಿ ರಥ ಸಮರ್ಪಣಾ ಯಜ್ಞ ಧಾರ್ಮಿಕ ವಿಧಿವಿಧಾನಗಳು ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ 11:30 ಕ್ಕೆ ಯಜ್ಞ ಮಹಾ ಪೂರ್ಣಾಹುತಿ ನಡೆದ ಬಳಿಕ ಪ್ರಧಾನ ವೀರ ವೆಂಕಟೇಶ ಮತ್ತು ಉತ್ಸವ ಶ್ರೀ ಶ್ರೀನಿವಾಸ ದೇವರ ರಥಾರೋಹಣ ನಡೆಯಿತು.

ಈ ಸಂದರ್ಭದಲ್ಲಿ ನೂತನ ರಥ ಸಮರ್ಪಣೆ ಗೆ ಸೇವೆ ಸಲ್ಲಿಸಿದ ಮಹನೀಯರಿಗೆ ಶ್ರೀಗಳವರ ದಿವ್ಯ ಹಸ್ತಗಳಿಂದ ಗಂಧ ಪ್ರಸಾದ ನೀಡಿದರು. ರಾತ್ರಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀಗಳವರ ಉಪಸ್ಥಿತಿಯಲ್ಲಿ ಸ್ವರ್ಣ ಗರುಡವಾಹನ ಸೇವೆ ನಡೆಯಿತು ಹಾಗೂ 7 ರಂದು ಅದ್ದೂರಿ ಮಂಗಳೂರು ರಥೋತ್ಸವದೊಂದಿಗೆ ಈ‌ ಎಲ್ಲಾ ಪೂಜಾ ವಿಧಾನಗಳು ಸಮಾಪನಗೊಳ್ಳಲಿದೆ.

Edited By : Nagesh Gaonkar
Kshetra Samachara

Kshetra Samachara

03/02/2022 05:36 pm

Cinque Terre

5.34 K

Cinque Terre

0