ಹೆಬ್ರಿ: ಯಕ್ಷಗಾನದ ವೇಳೆ ವೇಷಧಾರಿಗೆ ಮೈಮೇಲೆ ದೈವ ಆವೇಶವಾಗಿ ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.
ಹೆಬ್ರಿ ಸಮೀಪದ ಬೆಪ್ದೆ ಎಂಬಲ್ಲಿ ಮಡಮಕ್ಕಿ ಮೇಳದವರಿಂದ ಮಡಮಕ್ಕಿ ಕ್ಷೇತ್ರ ಮಹಾತ್ಮೆ ನಡೆಯುತ್ತಿತ್ತು. ಈ ವೇಳೆ ಮೇಳದ ಕಲಾವಿದ ವೀರಭದ್ರ ಸ್ವಾಮಿ ಎಂಬವರು ಕೋಟೆರಾಯನ ವೇಷ ಧರಿಸಿ, ರಂಗಸ್ಥಳ ಪ್ರವೇಶ ಆಗುತ್ತಿದ್ದಂತೆ, ದೈವಾವೇಶ ಆಗಿದೆ. ಈ ವೇಳೆ ಹತ್ತು ನಿಮಿಷದವರೆಗೆ ಪ್ರೇಕ್ಷಕರು ಪಾತ್ರಧಾರಿಯನ್ನು ಹಿಡಿದುಕೊಂಡರೂ ಆವೇಶ ನಿಲ್ಲಲಿಲ್ಲ. ಕೊನೆಗೆ ಚೌಕಿಯಿಂದ ದೇವರ ತೀರ್ಥ ತಂದು ಪ್ರೋಕ್ಷಣೆ ಮಾಡಿದ ಬಳಿಕ ಕಲಾವಿದ ಮೊದಲ ಸ್ಥಿತಿಗೆ ಬಂದಿದ್ದಾರೆ. ಘಟನೆಯನ್ನು ಪ್ರೇಕ್ಷಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್ ಆಗಿದೆ.
Kshetra Samachara
29/01/2022 10:57 am