ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ಸಂಭ್ರಮದಿಂದ ನಡೆಯಿತು.
ಜ.20 ಗುರುವಾರ ಹಗಲು ರಥೋತ್ಸವ ನಡೆದು ರಾತ್ರಿ , ಬಯನ ಬಲಿ,ಭೂತಬಲಿ ಶ್ರೀದೇವರ ಕವಾಟ ಬಂಧನ ನಡೆಯಿತು
ಶುಕ್ರವಾರ ಬೆಳಿಗ್ಗೆ ಕವಾಟೋದ್ಘಾಟನೆ, ಮಹಾಭಿಷೇಕ, ಅಲಂಕಾರ ಪೂಜೆ, ಪ್ರಸಾದ ವಿತರಣೆ ತುಲಾಭಾರ ಸೇವೆ ನಡೆಯಿತು.
ಬೆಳಿಗ್ಗೆ 11.30ಕ್ಕೆ ಶ್ರೀ ನಾಗದೇವರಿಗೆ ಪಂಚಾಮೃತ ಅಭಿಷೇಕ , ಶ್ರೀ ರಕ್ತೇಶ್ವರಿ ದೈವಕ್ಕೆ ಭೋಗ, ಮಧ್ಯಾಹ್ನ 12:30 ಕ್ಕೆ ಶ್ರೀ ದೇವರಿಗೆ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಸಾಯಂಕಾಲ 5 ಗಂಟೆಗೆ ಹಳೆಯಂಗಡಿ ಲಚ್ಚಿಲು ಸಂಕೇಸ ಶ್ರೀ ಜಾರಂದಾಯ ದೈವದ ಭಂಡಾರ ಆಗಮನದ ಬಳಿಕ 7 ಗಂಟೆಗೆ ಶ್ರೀ ದೇವರ ಉತ್ಸವ ಬಲಿ ಹೊರಟು ಓಕುಳಿ ಬಲಿಯಾಗಿ ಪಲ್ಲಕ್ಕಿಯಲ್ಲಿ ದೇವರು ಮೆರವಣಿಗೆ ಮೂಲಕ ಹೊರಟು ಶ್ರೀ ಗೌರಿಶಂಕರ ದೇವಸ್ಥಾನದಲ್ಲಿ ಕಟ್ಟೆ ಪೂಜೆ ನಡೆದು ಬಳಿಕ ಶ್ರೀದೇವರ ಮಹಾ ರಥೋತ್ಸವ , ಅವಭೃತ ಸ್ನಾನ, ಜಲಕದ ಬಲಿ, ಶ್ರೀ ದೈವ-ದೇವರ ಭೇಟಿ, ಧ್ವಜಾವರೋಹಣ, ಶ್ರೀ ಜಾರಂದಾಯ ದೈವದ ಕೋಲ ಬಲಿ, ಪ್ರಸಾದ ವಿತರಣೆ, ಶ್ರೀ ದೈವದ ಭಂಡಾರ ನಿರ್ಗಮನ ನಡೆದು ಜಾತ್ರಾ ಮಹೋತ್ಸವ ಸಮಾಪನ ಗೊಂಡಿತು.
ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ನಿರ್ದೇಶಕ ಶ್ಯಾಮ್ ಪ್ರಸಾದ್, ಪಡುಪಣಂಬೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮೊಕ್ತೇಸರ ರಂಗನಾಥ ಭಟ್ ವ್ಯವಸ್ಥಾಪನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Kshetra Samachara
22/01/2022 02:15 pm