ಕಾಪು: ಉಡುಪಿ ಜಿಲ್ಲೆಯ ಕಾಪುವಿನ ಅಡ್ವೆ ಎಂಬಲ್ಲಿ ವೇದ ವಿದ್ವಾಂಸರೊಬ್ಬರು ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ದೇಶದ ಪ್ರಧಾನ ಮಂತ್ರಿಗಾಗಿ ಯಾಗ ಮಾಡುತ್ತಿದ್ದಾರೆ! ನರೇಂದ್ರ ಮೋದಿಯವರಿಗೆ ಮತ್ತು ದೇಶದ ಕ್ಷೇಮ ಸುಭಿಕ್ಷೆ- ಸಮೃದ್ಧಿ- ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತಿ ಶ್ರದ್ಧೆಯಿಂದ ನಡೆಯುತ್ತಿದ್ದ ಋಗ್ವೇದ ಸಂಹಿತಾ ಯಾಗ ಇಂದು ಸಂಪನ್ನಗೊಂಡಿತು.
ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃ. ಈಗಾಗಲೇ ಲೋಕದ ಒಳಿತಿಗಾಗಿ 9 ಬಾರಿ ಋಕ್ ಸಂಹಿತಾ ಯಾಗವನ್ನು ನಡೆಸಿದ್ದು, ಈ ಬಾರಿ ಹತ್ತನೇ ಸಲದ ಯಾಗವನ್ನು ಪೂರ್ಣಗೊಳಿಸಿದ್ದಾರೆ!
ಕಳೆದ ಕೊರೊನಾ ವಿಪತ್ತಿನ ಸಂದರ್ಭದಿಂದ ಆರಂಭಿಸಿ 2 ವರ್ಷಗಳಿಂದ ( ಒಂದು ದಿನವೂ ಬಿಡದೇ ) ನಿತ್ಯ ಅದ್ಭುತವೆನಿಸುವ ಹತ್ತನೇ ಬಾರಿಯ ಸಂಪೂರ್ಣ ಋಗ್ವೇದ ಸಂಹಿತಾ ಯಾಗವನ್ನು ಇಡೀ ದೇಶ ಸುಭಿಕ್ಷೆ -ಸಮೃದ್ಧಿ -ನೆಮ್ಮದಿ -ಶಾಂತಿಗಾಗಿ ಪ್ರಾರ್ಥಿಸಿ, ಮೋದಿಜೀಯವರ ಹೆಸರು ಮತ್ತು ನಕ್ಷತ್ರದಲ್ಲಿ ಸಂಕಲ್ಪ ನೆರವೇರಿಸುತ್ತಿದ್ದರು.
ನಿನ್ನೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶಾಸಕ ಲಾಲಾಜಿ ಆರ್. ಮೆಂಡನ್ , ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಸುರೇಶ್ ನಾಯಕ್ ಉಪಸ್ಥಿತಿಯಲ್ಲಿ ಈ ಬೃಹತ್ ಯಾಗದ ಪೂರ್ಣಾಹುತಿ ನೆರವೇರಿತು. ಅನೇಕ ವೈದಿಕ ವಿದ್ವಾಂಸರು ಉಪಸ್ಥಿತರಿದ್ದರು.
Kshetra Samachara
21/01/2022 02:33 pm