ಮುಲ್ಕಿ: ಮುಲ್ಕಿ ಸಮೀಪದ ಪಡುಪಣಂಬೂರು ಹೊಯಿಗೆ ಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗುರುವಾರ ಹಗಲು ರಥೋತ್ಸವ ಸಂಭ್ರಮದಿಂದ ಸರಳ ರೀತಿಯಲ್ಲಿ ನಡೆಯಿತು
ಗುರುವಾರ ಪ್ರಾತಃಕಾಲ ವೇದಮೂರ್ತಿ ಶಿಬರೂರು ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ, ನವಕ ಪ್ರಧಾನ , ಅಲಂಕಾರ ಪೂಜೆ ಮಹಾಪೂಜೆ ನಡೆಯಿತು ಪೂರ್ವಾಹ್ನ 10 ಗಂಟೆಗೆ ಶ್ರೀದೇವರ ಬಲಿ ಹೊರಟು ಶ್ರೀದೇವರ ರಥಾರೋಹಣ, ಪಲ್ಲಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ರಾತ್ರಿ ಹೂವಿನ ಪೂಜೆ, ಬಯನಬಲಿ, ಶ್ರೀ ಭೂತ ಬಲಿ ಕಮಾಟ ಬಂಧನ ನಡೆಯಿತು.
ಈ ಸಂದರ್ಭ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎಚ್. ರಂಗನಾಥ ಭಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನವೀನ್ ಶೆಟ್ಟಿ ಎಡ್ಮೆಮಾರ್, ರಾಮದಾಸ್ ಪುತ್ರನ್, ರಮೇಶ್ ಸುವರ್ಣ, ದೇವದಾಸ್ ಸುವರ್ಣ, ಗಂಗಾಧರ ,ಕರುಣಾಕರ ಪುತ್ರನ್, ಸತ್ಯ ವಿ ಆಚಾರ್ಯ,, ಸುಗಂಧಿ ಯು ಪೂಜಾರಿ, ರಾಮಭಟ್, ಜಗನ್ನಾಥ ಭಟ್, ಎಸ್ ಕೆಪಿಎ ನ ಪಾವಂಜೆ ಮೋಹನ್ ರಾವ್ ,ಎಂ.ಕೆ.ಹೆಬ್ಬಾರ್ ಮತ್ತಿತರರು ಉಪಸ್ಥಿತರಿದ್ದರು.
ಶುಕ್ರವಾರ ಬೆಳಿಗ್ಗೆ ಶ್ರೀದೇವರ ಕವಾಟೋದ್ಘಾಟನೆ, ಮಹಾ ಅಭಿಷೇಕ, ಅಲಂಕಾರ ಪೂಜೆ,ಪ್ರಸಾದ ವಿತರಣೆ, ತುಲಾಭಾರ ಸೇವೆ, ರಾತ್ರಿ ಶ್ರೀ ದೇವರ ಮಹಾರಥೋತ್ಸವ ನಡೆಯಲಿದೆ.
Kshetra Samachara
20/01/2022 06:30 pm